ಬೆಂಗಳೂರು : ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಅಧ್ಯಕ್ಷರ, ಉಪಾಧ್ಯಕ್ಷರ ಗೌರವಧನ ಮತ್ತು ಸದಸ್ಯರ ಸೆಪ್ಟೆಂಬರ್-2025 ರಿಂದ ಮಾರ್ಚ್ 2026 ಮಾಹೆಯ ಸಭಾ ಭತ್ಯೆ ಪಾವತಿಗಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.
ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ರಚವನೆಯಾಗಿದ್ದು, ಉಲ್ಲೇಖಿತ ಆದೇಶದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಅಧ್ಯಕ್ಷರ, ಉಪಾಧ್ಯಕ್ಷರ ಗೌರವಧನ ಮತ್ತು ಸದಸ್ಯರ ಸಭಾ ಭತ್ಯೆಯನ್ನು ನಿಗದಿಪಡಿಸಿ ಆದೇಶಿಸಲಾಗಿದೆ.
ಆದ್ದರಿಂದ 2025-26ನೇ ಸಾಲಿಗೆ ಸೆಪ್ಟೆಂಬರ್-2025 ರಿಂದ ಮಾರ್ಚ್ 2026 ಮಾಹೆಯ ಗೌರವಧನ ಮತ್ತು ಸಭಾ ಭತ್ಯೆಯನ್ನು ಪಾವತಿಸಲು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಲು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಇ 168 ವೆಚ್ಚ 6/2025(ಇ) ದಿನಾಂಕ: 20ನೇ ನವೆಂಬರ್ 2025
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧ-1 ಕಾಲಂ 2ರ ಜಿಲ್ಲಾ ಪಂಚಾಯತಿಗಳಿಗೆ ಕಾಲಂ 3 ಕಾರ್ಯಕ್ರಮದಡಿ ರೂ.184.45ಲಕ್ಷಗಳನ್ನು ಮತ್ತು ಅನುಬಂಧ-2 ಕಾಲಂ 2ರ ತಾಲ್ಲೂಕು ಪಂಚಾಯತಿಗಳಿಗೆ ಕಾಲಂ 3 ಕಾರ್ಯಕ್ರಮದಡಿ ರೂ.886.69ಲಕ್ಷಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಅಧ್ಯಕ್ಷರ, ಉಪಾಧ್ಯಕ್ಷರ ಗೌರವಧನ ಮತ್ತು ಸದಸ್ಯರ ಸೆಪ್ಟೆಂಬರ್-2025 ರಿಂದ ಮಾರ್ಚ್ 2026 ಮಾಹೆಯ ಸಭಾ ಭತ್ಯೆಯನ್ನು ಪಾವತಿಸಲು ಅನುದಾನ ಒಟ್ಟಾರೆ ರೂ.1071.14ಲಕ್ಷ (ರೂಪಾಯಿ ಒಂದು ಸಾವಿರದ ಎಪ್ಪತ್ತೊಂದು ಲಕ್ಷದ ಹದಿನಾಲ್ಕು ಸಾವಿರ ಮಾತ್ರ) ಗಳನ್ನು ಬಿಡುಗಡೆಗೊಳಿಸಿದೆ.
(ಸೂಚನೆ: ಈ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಕಾಲಕಾಲಕ್ಕೆ ನೀಡಲಾಗಿರುವ ಸೂಚನೆಗಳ ಅನುಸಾರ ಆದ್ಯತೆಯ ಮೇಲೆ ವೆಚ್ಚ ಮಾಡತಕ್ಕದ್ದು ಹಾಗೂ ಷರಾದಲ್ಲಿ ತಿಳಿಸಿರುವ ಉದ್ದೇಶಕ್ಕೆ ಮಾತ್ರ ವೆಚ್ಚ ಮಾಡತಕ್ಕದ್ದು, ಯಾವುದೇ ಹಂತದಲ್ಲಿ ಅಂದರೆ ಅನುಷ್ಠಾನಾಧಿಕಾರಿಗಳ ಹಂತದಲ್ಲಿ ವಿಳಂಬವಾಗಿ ಅನುದಾನ ವ್ಯಪಗತವಾದಲ್ಲಿ ಮತ್ತೊಮ್ಮೆ ಅನುದಾನವನ್ನು ಒದಗಿಸುವುದಿಲ್ಲವೆಂದು ಮತ್ತು ವಿಳಂಬಗೊಳಿಸಿದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮವಹಿಸಲಾಗುವುದು.)









