ಆಸ್ತಿ ಮಾಲೀಕರು 2025-26ನೇ ಸಾಲಿನ ಆಸ್ತಿ ತೆರಿಗೆಯನ್ನು ಮತ್ತು ಇತರೆ ತೆರಿಗೆಗಳನ್ನು ಎಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಪಾವತಿಸಿ ಶೇ.05 ರಷ್ಟು ರಿಯಾಯಿತಿಯನ್ನು ಪಡೆಯಲು ಮತ್ತು https:/davangerecitycorp.org ಲಿಂಕ್ನ್ನು ಆನ್ಲೈನ್ ಮೂಲಕ ಯು.ಪಿ.ಐ ಉಪಯೋಗಿಸಿಕೊಂಡು ಆಸ್ತಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಆಸ್ತಿ ಮಾಲೀಕರು ಈವರೆಗೂ ತೆರಿಗೆಗಳನ್ನು ಪಾವತಿಸದಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಕಂದಾಯ ವಿಭಾಗದ ಅಧಿಕಾರಿಗಳು ಸರ್ಕಾರದ ಸುತ್ತೋಲೆ ಕರ್ನಾಟಕ ಮುನ್ಸಿಪಲ್ ಕಾರ್ಪೆರೇಷನ ತೆರಿಗೆ (ತಿದ್ದುಪಡಿ) ನಿಯಮಗಳು 2025 ರಂತೆ ತೆರಿಗೆಗಳನ್ನು ಬಾಕಿ ಉಳಿಸಿಕೊಂಡಿರುವ ಸ್ವತ್ತಿನ ಮಾಲೀಕರುಗಳಿಗೆ ಡಿಮ್ಯಾಂಡ್ ನೋಟಿಸ್ನ್ನು ನೀಡಲಾಗುತ್ತದೆ.
ಡಿಮ್ಯಾಂಡ್ ನೋಟಿಸ್ಗೆ ಅನುಗುಣವಾಗಿ 30 ದಿನಗಳಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಬಾಕಿ ಮೊತ್ತ ಪಾವತಿ ಮಾಡದಿದ್ದರೆ ಆಸ್ತಿಯನ್ನು ಮಹಾನಗರಪಾಲಿಕೆಯೊಂದಿಗೆ ಲಿಂಕ್ ಮಾಡಲಾಗುತ್ತದೆ. ಆಗ ಆಸ್ತಿ ಮಾಲೀಕರು ತಮ್ಮ ಆಸ್ತಿ ಮಾರಾಟ ಮಾಡುವುದು ಹಾಗೂ ವರ್ಗಾವಣೆ ಮಾಡುವುದಕ್ಕೆ ಕಷ್ಟವಾಗುವುದು.. ಆದ್ದರಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರು ತೆರಿಗೆಗಳನ್ನು ಪಾವತಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಲಾಗಿದೆ.








