ಬೆಂಗಳೂರು: ಸಂಯುಕ್ತ ಕರ್ನಾಟಕ, ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ 93 ವಸಂತ ತುಂಬಿದ ಹಿರಿಯ ಪತ್ರಕರ್ತರಾದ ಸತ್ಯನಾರಾಯಣ ನಾಡಿಗ್ ಅವರ ಆಸ್ಪತ್ರೆ ಚಿಕಿತ್ಸೆ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 94 ಸಾವಿರ ರೂ ಪರಿಹಾರ ಬಿಡುಗಡೆ ಮಾಡಿದ್ದಾರೆ.
ಸತ್ಯನಾರಾಯಣ ನಾಡಿಗ್ ಅವರು ಕ್ಯಾನ್ಸರ್ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಸರ್ಕಾರದ ಗಮನಕ್ಕೆ ತಂದಿದ್ದು ಚಿಕಿತ್ಸೆಗೆ ನೆರವು ಕೋರಿದ್ದರು.
ಕೆಯುಡಬ್ಲ್ಯೂಜೆ ಮನವಿ ಮೇರೆಗೆ ಪರಿಹಾರ ಮಂಜೂರು ಮಾಡಿದ ಸಿಎಂ ಸಿದ್ದರಾಮಯ್ಯಅವರಿಗೆ, ಈ ನಿಟ್ಟಿನಲ್ಲಿ ಸಹಕಾರ ನೀಡಿದ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಧನ್ಯವಾದ ಸಲ್ಲಿಸಿದೆ.
ALERT : ಈ `ಪಾಸ್ ವರ್ಡ್’ಗಳನ್ನು ಬಳಸಿದ್ರೆ ನಿಮ್ಮ `ಡೇಟಾ ಲೀಕ್’ ಆಗಬಹುದು ಎಚ್ಚರ.!
BREAKING : ರಾಜ್ಯ ಸಚಿವ ಸಂಪುಟ ಪುನಾರಚನೆ ಸದ್ಯಕ್ಕಿಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ








