ಬೆಂಗಳೂರು: ರಾಜ್ಯಾದ್ಯಂತ ತಾಪಮಾನದಲ್ಲಿ ಭಾರೀ ಕುಸಿದತವಾಗಿದ್ದು, ಕಳೆದ ವಾರದಿಂದ ಚಳಿ ಹೆಚ್ಚಳವಾಗಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ, ರಾಜ್ಯದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ 2-3 ಡಿ.ಸೆ. ಉಷ್ಣಾಂಶ ಕಡಿಮೆಯಾಗಿದೆ. ಸದ್ಯ ಗರಿಷ್ಠ ತಾಪಮಾನ ಸರಾಸರಿ 29 -30 ಡಿ.ಸೆ, ಕನಿಷ್ಠ ತಾಪಮಾನ ಸರಾಸರಿ 16-ರಿಂದ 18 ಡಿ.ಸೆ ದಾಖಲಾಗುತ್ತಿದೆ.
ಉತ್ತರ ಒಳನಾಡಿನ ಬೀದರ್, ಬೆಳಗಾವಿ, ಕಲಬುರಗಿ, ಯಾದಗಿರಿ, ವಿಜಯಪುರ, ಹಾವೇರಿ, ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸಾಕಷ್ಟು ಇಳಿಕೆಯಾಗಿದೆ. ವಿಜಯಪುರ ಮತ್ತು ಬೀದರ್ ಜಿಲ್ಲೆಯಲ್ಲಿ (ನ.17) ಕನಿಷ್ಠ ತಾಪಮಾನ 9.5 ಡಿ.ಸೆ.ವರೆಗೆ ತಗ್ಗಿದೆ. ಗರಿಷ್ಠ ತಾಪಮಾನ ಸರಾಸರಿ 27 ಡಿ.ಸೆ. ದಾಖಲಾಗಿದೆ.
ಬೆಂಗಳೂರಿನಲ್ಲಿ ಸಾಮಾನ್ಯಕ್ಕಿಂತ 1.5 ಡಿ.ಸೆ ಕಡಿಮೆ ತಾಪಮಾನ ದಾಖಲಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳವರೆಗೆ ಮುಂಜಾನೆ ಮಂಜು ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.








