ಬೆಂಗಳೂರು: ಮುಖ್ಯಮಂತ್ರಿ ಹಾಗೂ ಗಣ್ಯಾತಿಗಣ್ಯರು ರಾಜ್ಯದ ಶಕ್ತಿ ಕೇಂದ್ರ ವಿಧಾನ ಸೌಧದ ತಮ್ಮ ಕಚೇರಿಗೆ ತೆರಳಲು ಹಾಗೂ ದೈನಂದಿನ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಏರಿಳಿವ ತೇರಿನ ನಿರ್ವಾಹಕ ( ಲಿಫ್ಟ್ ಆಪರೇಟರ್ ) ಆಗಿ 32 ವರ್ಷಗಳಿಗೂ ಹೆಚ್ಚು ಕಾಲ ಅಳಿಲು ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದ ಕೃಷ್ಣಪ್ಪ ಇನ್ನಿಲ್ಲ.
ಜುಲೈ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಿದ್ದ ಕೃಷ್ಣಪ್ಪ ತಮ್ಮ ಪಿಂಚಣಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಸಲ್ಲಿಸಲು ನಿನ್ನೆಯಷ್ಟೇ ವಿಧಾನ ಸೌಧಕ್ಕೆ ಆಗಮಿಸಿದ್ದರು. ಇಂದು ಮತ್ತೆ ಬರುವುದಾಗಿ ತಮ್ಮ ಗೆಳೆಯರಿಗೆ ತಿಳಿಸಿದ್ದರು.ಆದರೆ, ರಾತ್ರಿ ಮಲಗಿದವರು ಬಹುಶಃ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಬೆಳಿಗ್ಗೆ ಏಳಲೇ ಇಲ್ಲ ಎಂದು ಅವರ ಸಹವರ್ತಿಗಳು ತಿಳಿಸಿದ್ದಾರೆ.
ವಿಧಾನ ಸೌಧದಲ್ಲಿ ನಡೆಯುವ ಕಾರ್ಯಕ್ರಮ ಮತ್ತು ಕಾರ್ಯ ಕಲಾಪಗಳು ಹಾಗೂ ಸಭೆ ಮತ್ತು ಸಮಾರಂಭಗಳ ವರದಿ ಮಾಡುವ ಮಾಧ್ಯಮದವರಿಗೂ ಕೃಷ್ಣಪ್ಪ ಅತ್ಯಂತ ಪರಿಚಿತರಾಗಿದ್ದರು.
ALERT : ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ `ಟಾಯ್ಲೆಟ್ ಸೀಟ್’ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!
BIG NEWS: ಸಾಗರ ತಾಲ್ಲೂಕಲ್ಲಿ ’50 ಕೋಟಿ’ಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ‘ಆರ್ಥಿಕ ಇಲಾಖೆ’ ಅನುಮತಿಸಿ ಆದೇಶ








