ದಾವಣಗೆರೆ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರ ಮೊಬೈಲ್ ಕಳ್ಳತನ ಮಾಡಿದ ಖದೀಮರು ಅವರ ಯುಪಿಐ ಮೂಲಕ 1.44 ಲಕ್ಷ ರೂ.ದೋಚಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ನಗರ ಸಾರಿಗೆ ಬಸ್ನಲ್ಲಿ ಸಂಚರಿಸುತ್ತಿದ್ದ ವೃದ್ಧರೊಬ್ಬರ ಮೊಬೈಲ್ ಕಳವು ಮಾಡಿದ ಖದೀಮರು ಯುಪಿಐ ಮೂಲಕ ಅವರ ಮೂರು ಬ್ಯಾಂಕ್ ಖಾತೆಗಳಿಂದ 1.44 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಸರಸ್ವತಿ ನಗರದ ನಿವಾಸಿಯಾಗಿರುವ ವೃದ್ಧರ ಮೊಬೈಲ್ ಕಳವು ಮಾಡಿರುವ ಖದೀಮರು ಬಳಿಕ ಅವರಲ್ಲಿದ್ದ ಯುಪಿಐ ಆಧಾರಿತ ಆ್ಯಪ್ ಗಳಿಂದ ಆನ್ ಲೈನ್ ಮೂಲಕ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








