ನವದೆಹಲಿ: 2027 ರ ಆಗಸ್ಟ್ ವೇಳೆಗೆ ಅಹಮದಾಬಾದ್-ವಾಪಿ ಮಾರ್ಗದಲ್ಲಿ 100 ಕಿ.ಮೀ ದೂರವನ್ನು ಕ್ರಮಿಸುವ ಮೊದಲ ಬುಲೆಟ್ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಹೇಳಿದ್ದಾರೆ.
ಬುಲೆಟ್ ರೈಲು ಆಗಸ್ಟ್ 2027 ರಲ್ಲಿ ಅಹಮದಾಬಾದ್ ನಿಂದ ವಾಪಿಗೆ ತನ್ನ ಉದ್ಘಾಟನಾ ಸಂಚಾರವನ್ನು ನಡೆಸಲಿದೆ. ಇದರೊಂದಿಗೆ, ಇದು 100 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ” ಎಂದು ವೈಷ್ಣವ್ ಹೇಳಿದರು. 2029 ರಿಂದ ಅಹಮದಾಬಾದ್ ನಿಂದ ಮುಂಬೈಗೆ ಪೂರ್ಣ ಉದ್ದದ ರೈಲು ಸಂಚಾರ ಆರಂಭವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಎರಡು ನಗರಗಳ ನಡುವಿನ 508 ಕಿ.ಮೀ ದೂರವನ್ನು 1 ಗಂಟೆ 58 ನಿಮಿಷಗಳಲ್ಲಿ ಕ್ರಮಿಸಲಾಗುವುದು ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸೂರತ್ ನಲ್ಲಿ ಸ್ಥಳ ಭೇಟಿ ನೀಡಿದ ಸಂದರ್ಭದಲ್ಲಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ ಎರಡು ದಿನಗಳ ನಂತರ ಈ ಘೋಷಣೆ ಬಂದಿದೆ. ನಿರ್ಮಾಣದ ವೇಗದ ಬಗ್ಗೆ ಪ್ರಧಾನಿ ತುಂಬಾ ಸಂತೋಷಪಟ್ಟಿದ್ದಾರೆ ಎಂದು ವೈಷ್ಣವ್ ಹೇಳಿದರು.
ಇದಕ್ಕೂ ಮುನ್ನ ಸೂರತ್ ಮತ್ತು ಬಿಲ್ಲಿಮೋರಾ ನಡುವಿನ 50 ಕಿ.ಮೀ ಉದ್ದದ ಮಾರ್ಗದಲ್ಲಿ ಉದ್ಘಾಟನಾ ಓಟವನ್ನು ಪ್ರಸ್ತಾಪಿಸಲಾಗಿತ್ತು. ಆದಾಗ್ಯೂ, ಯೋಜನೆಯ ತ್ವರಿತ ಪ್ರಗತಿಯಿಂದಾಗಿ, ಅಹಮದಾಬಾದ್ ನಿಂದ ವಾಪಿ ನಡುವಿನ 100 ಕಿ.ಮೀ ದೂರದ ಮಾರ್ಗದಲ್ಲಿ ಬುಲೆಟ್ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಅಹಮದಾಬಾದ್ (ಸಬರಮತಿ) ಮತ್ತು ಮುಂಬೈ ನಡುವಿನ 508 ಕಿ.ಮೀ ಹೈಸ್ಪೀಡ್ ರೈಲು ಕಾರಿಡಾರ್ ಅನ್ನು ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುವ ರೈಲುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಯೋಜನೆಯ ಅಡಿಪಾಯವನ್ನು 2017 ರಲ್ಲಿ ಹಾಕಲಾಯಿತು








