ಶಿವಮೊಗ್ಗ: ಲಗೇಜ್ ಆಟೋ ರಿಕ್ಷಾವನ್ನು ಕೆಲಸ ಮುಗಿಸಿ ರಾತ್ರಿ ನಿಲ್ಲಿಸಿ ಹೋಗಿ ಬಂದು, ಬೆಳಗ್ಗೆ ಬಂದು ನೋಡಿದ್ರೆ ನಾಪತ್ತೆಯಾಗಿತ್ತು. ಆ ಲಗೇಜ್ ಆಟೋವನ್ನು ಯಾರೋ ಕದ್ದೊಯ್ದಿದ್ದಾರೆ. ಹುಡುಕಿ ಕೊಡುವಂತೆ ಮಾಲೀಕ ಸಲ್ಲಿಸಿದ ದೂರಿನ ಮೂರೇ ದಿನಗಳಲ್ಲಿ ವಾಹನ ಸಹಿತ ಕಳ್ಳನನ್ನು ಎಡೆಮುರಿ ಕಟ್ಟಿ ಸಾಗರದ ಆನಂದಪುರ ಪೊಲೀಸು ಬಂಧಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಾಗರ ಗ್ರಾಮಾಂತರ ವೃತ್ತದ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೇಕ್ ಮಿರಾನ್ ಎಂಬಾತ ದಿನಾಂಕ 13-11-2025ರಂದು ತನ್ನ ಲಗೇಜ್ ಆಟೋ ರಿಕ್ಷಾ ಕಳ್ಳತನವಾಗಿದೆ. ಯಾರೋ ಕದ್ದೊಯ್ದಿದ್ದಾರೆ. ಹುಡುಕಿ ಕೊಡುವಂತೆ ದೂರು ನೀಡಿದ್ದರು ಎಂದಿದೆ.
ವಾಹನ ಮಾಲೀಕ ನೀಡಿದಂತ ದೂರಿನ ಹಿನ್ನಲೆಯಲ್ಲಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಲಗೇಜ್ ಆಟೋ ರಿಕ್ಷಾ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಬೇದಿಸಲು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದಂತ ಕಾರಿಯಪ್ಪ, ರಮೇಶ್ ಹಾಗೂ ಸಾಗರ ಉಪ ವಿಭಾಗದ ಪೊಲೀಸ್ ಉಪಾಧಿಕ್ಷಕರಾದಂತ ಕೇಶವ ಕೆಇ, ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದಂತ ಸಂತೋಷ್ ಶೆಟ್ಟಿ ಮಾರ್ಗದರ್ಶನದಲ್ಲಿ, ಆನಂದಪುರ ಠಾಣೆಯ ಠಾಣಾಧಿಕಾರಿ ಪ್ರವೀಣ್, ಶಿವಮೊಗ್ಗದ ಸಿಡಿಆರ್ ಸೆಲ್ ಸಿಬ್ಬಂದಿ ಇಂದ್ರೇಶ, ಹೆಡ್ ಕಾನ್ಸ್ ಸ್ಟೇಬಲ್ ಪ್ರಶಾಂತ್, ಪಿಸಿ ಉಮೇಶ್ ಲಮಾಣಿ, ಸಂತೋಷ್, ಸುನೀಲ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು ಎಂದು ತಿಳಿಸಿದೆ.
ಈ ತಂಡವು ಲಗೇಜ್ ಆಟೋ ರಿಕ್ಷಾ ಕದ್ದ ಕಳ್ಳನನ್ನು ಪತ್ತೆ ಹಚ್ಚಲು ಕಾರ್ಯಪ್ರವೃತ್ತವಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿತ್ತು. ದಿನಾಂಕ 16-11-2025ರಂದು ಪ್ರಕರಣ ದಾಖಲಾದಂತ ಮೂರೇ ದಿನದಲ್ಲಿ ಲಗೇಜ್ ಆಟೋ ಕದ್ದಿದ್ದಂತ ಶಿವಮೊಗ್ಗ ತಾಲ್ಲೂಕಿನ ಜಾವಳ್ಳಿ ಗ್ರಾಮದ ಪೈಂಟಿಂಗ್ ಕೆಲಸ ಮಾಡುತ್ತಿದ್ದಂತ ಆರೋಪಿ ಅಶೋಕ್ ಎಂಬಾತನನ್ನು ಬಂಧಿಸಿದೆ. ಬಂಧಿತ ಆರೋಪಿಯಿಂದ ರೂ.1,10,000 ಮೌಲ್ಯ ಬೆಲೆ ಬಾಳುವಂತ ಆಪೆ ಗೂಡ್ಸ್ ಆಟೋವನ್ನು ಜಪ್ತಿ ಮಾಡಲಾಗಿದೆ. ಆ ಬಳಿಕ ವಿಚಾರಣೆ ನಡೆಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ತಿಳಿಸಿದೆ.
ಲಗೇಜ್ ಆಟೋ ಕದ್ದ ಕಳ್ಳನನ್ನು ಪ್ರಕರಣ ದಾಖಲಾದಂತ ಮೂರು ದಿನಗಳಲ್ಲಿ ಸಾಗರ ಗ್ರಾಮಾಂತರ ವೃತ್ತದ ಆನಂದಪುರ ಠಾಣೆಯ ಪೊಲೀಸರು ವಾಹನ ಸಹಿತ ಕಳ್ಳನನ್ನು ಬಂಧಿಸಿದ್ದಕ್ಕೆ ಶಿವಮೊಗ್ಗ ಎಸ್ಪಿ ಶ್ಲಾಘನೆ, ಪ್ರಶಂಸೆ ವ್ಯಕ್ತಪಡಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
Watch Video: ‘ಶಾಸಕ’ರ ಮೇಲಿನ ಪ್ರೀತಿಯ ಅಭಿಮಾನಕ್ಕೆ ಹಾಡು ಬರೆದು ಹಾಡಿದ ‘ಶಾಲಾ ಮಕ್ಕಳು’








