ಧಾರವಾಡ : ಅಗ್ನಿವೀರ ನೇಮಕಾತಿಯನ್ನು ನವೆಂಬರ್ 13, 2025 ರಿಂದ ನವೆಂಬರ್ 19, 2025 ರವರೆಗೆ ಬಳ್ಳಾರಿ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಅಗ್ನವೀರ ಅಭ್ಯರ್ಥಿಗಳು ಆನ್‍ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಇ ಯಲ್ಲಿ ಜೂನ್ 30,2025 ರಿಂದ ಜುಲೈ 10, 2025 ರವೆಗೆ ಉತ್ತೀರ್ಣರಾಗಿರುವ (ಅಭ್ಯರ್ಥಿಗಳು) ರ್ಯಾಲಿಗೆ ಹಾಜರಾಗಬೇಕು.
ಅಗ್ನವೀರ ಸಾಮಾನ್ಯ ಡ್ಯೂಟಿ ವರ್ಗಕ್ಕೆ ಮಾತ್ರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಬೆಂಗಳೂರು (ಪ್ರಾ.ಕ): ಬೆಂಗಳೂರು ನಗರದ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಹಾಜರಾಗಬೇಕು.
ಅಗ್ನಿವೀರ ಸಾಮಾನ್ಯ ಡ್ಯೂಡಿ ಹೊರತುಪಡಿಸಿ ಒಂದೇ ವರ್ಗಕ್ಕೆ ಅರ್ಜಿ ಸಲ್ಲಿಸಿದ ಎಲ್ಲ ಅಗ್ನಿವೀರ ಟೆಕ್ನಿಕಲ್, ಕ್ಲರ್ಕ್/ಸ್ಕ್ಟೋರ್ ಕೀಪರ್ ಟೆಕ್ನಿಕಲ್, ಟ್ರೇಡ್ಸ್ಮನ್ ಅಭ್ಯರ್ಥಿಗಳು ಹಾಗೂ ಬಹು ವರ್ಗಗಳಿಗೆ ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳು ಬೆಂಗಳೂರು (ಪ್ರಾ.ಕ): ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಹಾಗೂ (ಮಂಗಳೂರು): ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ, ದಾವಣಗೇರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಜರಾಗಬೇಕು.
ಅಗ್ನಿವೀರ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವು www.joinindianarmy.nic.in ನಲ್ಲಿ ಪ್ರಕಟಿಸಲಾಗಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರವೇಶಪತ್ರವನ್ನು ಅವರ ನೋಂದಾಯಿತ ಇ-ಮೇಲ್ ಐಡಿಗೆ ಕಳುಹಿಸಲಾಗಿದೆ.
BREAKING: ಕೆಂಪು ಕೋಟೆ ಸ್ಫೋಟ: ಮತ್ತೊಬ್ಬ ಆತ್ಮಹತ್ಯಾ ಬಾಂಬರ್‌ನ ಸಹಾಯಕನನ್ನು ಬಂಧಿಸಿದ NIA | Red Fort Blast
ರಾಜ್ಯದ ಕ್ರೀಡಾ ಸಾಧಕರಿಗೆ ಗುಡ್ ನ್ಯೂಸ್: ವಿವಿಧ ಪ್ರಶಸ್ತಿ, ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ








