ಬೆಂಗಳೂರು: ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಅಕ್ಕ ಪಡೆಯನ್ನು ಸರ್ಕಾರ ರಚಿಸಿದೆ. ಈ ಅಕ್ಕ ಪಡೆಯು ನವೆಂಬರ್.19ರಿಂದ ರಾಜ್ಯದಲ್ಲಿ ಕಾರ್ಯಾರಂಭ ಮಾಡಲಿದೆ.
ಹೌದು.. ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ʼಅಕ್ಕ ಪಡೆʼ ರೂಪಿಸಲಾಗಿದ್ದು, ನವೆಂಬರ್ 19 ರಿಂದ ಕಾರ್ಯಾರಂಭವಾಗಲಿದೆ. ಇದಕ್ಕಾಗಿ ಸಹಾಯವಾಣಿ ಸಂಖ್ಯೆ ಕೂಡ ಸರ್ಕಾರ ಆರಂಭಿಸಿದೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ 1098, 181 ಅಥವಾ 112ಗೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.
“ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ಇದೊಂದು ಕ್ರಾಂತಿಕಾರಿ ಯೋಜನೆಯಾಗಿದೆ. ಶಾಲಾ – ಕಾಲೇಜು, ಹಾಸ್ಟೆಲ್, ಮಾಲ್‌ಗಳು, ಜನನಿಬಿಡ ಪ್ರದೇಶಗಳಲ್ಲಿ ಅಕ್ಕ ಪಡೆ ವಾಹನ ಗಸ್ತು ತಿರುಗಲಿದೆ. ಮನೆಯಲ್ಲಿ, ನೆರೆ ಹೊರೆಯವರಿಂದ ತೊಂದರೆ ಅನುಭವಿಸುವ ಮಹಿಳೆಯರು ಸಹಾಯವಾಣಿ ಮೂಲಕ ಅಕ್ಕ ಪಡೆಯನ್ನು ಸಂಪರ್ಕಿಸಬಹುದು. ಪೊಲೀಸ್ ಇಲಾಖೆ ಹಾಗೂ ಎನ್‌ಸಿಸಿ ಸಹಯೋಗದಲ್ಲಿ ಈ ಪಡೆ ಕಾರ್ಯನಿರ್ವಹಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ʼಅಕ್ಕ ಪಡೆʼ ರೂಪಿಸಲಾಗಿದ್ದು, ನವೆಂಬರ್ 19 ರಿಂದ ಕಾರ್ಯಾರಂಭವಾಗಲಿದೆ.
“ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ಇದೊಂದು ಕ್ರಾಂತಿಕಾರಿ ಯೋಜನೆಯಾಗಿದೆ. ಶಾಲಾ – ಕಾಲೇಜು, ಹಾಸ್ಟೆಲ್, ಮಾಲ್‌ಗಳು, ಜನನಿಬಿಡ ಪ್ರದೇಶಗಳಲ್ಲಿ ಅಕ್ಕ ಪಡೆ ವಾಹನ ಗಸ್ತು ತಿರುಗಲಿದೆ. ಮನೆಯಲ್ಲಿ, ನೆರೆ ಹೊರೆಯವರಿಂದ ತೊಂದರೆ… pic.twitter.com/6iRg5Lyc8i
— DIPR Karnataka (@KarnatakaVarthe) November 17, 2025
ಶಿವಮೊಗ್ಗ: ಅಲ್ಪಸಂಖ್ಯಾತ ಬಂಧುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು- ಶಾಸಕ ಗೋಪಾಲಕೃಷ್ಣ ಬೇಳೂರು








