ಕಲಬುರಗಿ : ಬೆಳೆ ಹಾನಿಯಾದ ರೈತರ ವಿವರವನ್ನು ಈಗಾಗಲೇ PARIHARA (ಪರಿಹಾರ) ತಂತ್ರಾಂಶದಲ್ಲಿ ದಾಖಲಿಸಿದ್ದು, ಒಟ್ಟು 3,26,183 ರೈತರಿಗೆ ₹250.97 ಕೋಟಿ ಬೆಳೆ ಹಾನಿ ಪರಿಹಾರ ಮುಂದಿನ 3-4 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಅತಿವೃಷ್ಟಿಯಿಂದ ನೊಂದ ರೈತರಿಗೆ ಯಾವುದೇ ವಿಳಂಬ ಮಾಡದೆ ಸಕಾಲದಲ್ಲಿ ಸ್ಪಂದಿಸುವುದನ್ನು ನಮ್ಮ ಸರ್ಕಾರವು ಆದ್ಯತೆಯಾಗಿ ಪರಿಗಣಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ 69%ರಷ್ಟು ಹಾಗೂ ಸೆಪ್ಟೆಂಬರ್’ನಲ್ಲಿ 63% ರಷ್ಟು ಅಧಿಕ ಮಳೆಯಿಂದಾಗಿ NDRF ಮಾರ್ಗಸೂಚಿಯನ್ವಯ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಜಂಟಿ ಸಮೀಕ್ಷೆಯ ವರದಿಯ ಅನುಸಾರ ಕಲಬುರಗಿ ಜಿಲ್ಲೆಯಲ್ಲಿ 3,24,205 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ವರದಿಯಾಗಿರುತ್ತದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
– ಹತ್ತಿ, ತೊಗರಿ, ಸೂರ್ಯಕಾಂತಿ ಹಾಗೂ ಅರಿಶಿಣ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ಒಟ್ಟು 2,67,560 ರೈತರ 3,35,046.2 ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆಯ ಮಧ್ಯಂತರ ಪರಿಹಾರ (Mid-Season Adversity) ನೀಡಲು ಸರ್ಕಾರ ಆದೇಶಿಸಿದೆ. ಬೆಳೆವಿಮೆ ಪರಿಹಾರ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಹಾನಿಯಾದ ಹತ್ತಿ ಬೆಳೆ ನೋಂದಣಿ ಮಾಡಿಸಿದ ರೈತರ- ಸಂಖ್ಯೆ10,025. ಪ್ರದೇಶ-11,727.5 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ – ₹9.95 ಕೋಟಿ.
ತೊಗರಿ ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ- ಸಂಖ್ಯೆ 2,56,845. ಪ್ರದೇಶ- 3,22,734 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ- ₹232.81ಕೋಟಿ
ಸೂರ್ಯಕಾಂತಿ ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ- 382. ಪ್ರದೇಶ- 392.088 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ ₹0.24 ಕೋಟಿ.
ಅರಿಶಿಣ ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ- 308. ಪ್ರದೇಶ- 192.615 ಹೆಕ್ಟೇರ್. ಅಂದಾಜು ಬೆಳೆ ವಿಮೆ ಮಧ್ಯಂತರ ಪರಿಹಾರ ₹0.41ಕೋಟಿ.
ಒಟ್ಟು ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರ ಸಂಖ್ಯೆ -2,67,560. ಪ್ರದೇಶ- 3,35,046.2 ಹೆಕ್ಟೇರ್ ಹಾಗೂ ಒಟ್ಟು ಪರಿಹಾರ ₹243.41ಕೋಟಿ.
– ಉದ್ದು, ಹೆಸರು, ಸೋಯಾ ಅವರೆ ಹಾಗೂ ಇನ್ನಿತರ ಬೆಳಗಳಿಗೆ ಬೆಳೆ ಹಾನಿ ಕುರಿತು ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪದಡಿ (Localized calamity) ದೂರು ನೀಡಿದ ಒಟ್ಟು 22,385 ರೈತರಿಗೆ ₹8.79 ಕೊಟಿ ಬೆಳೆವಿಮೆ ಪರಿಹಾರ ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.








