ಬೆಂಗಳೂರು: ಸರ್ಕಾರಿ ಉದ್ಯೋಗಿಯೊಬ್ಬ ವೃತ್ತಿಯಲ್ಲಿದ್ದಾಗಲೇ ಅಕಾಲಿಕ ಮರಣ ಹೊಂದಿದಂತ ಸಂದರ್ಭದಲ್ಲಿ ಅವರ ಅವಲಂಬಿತರಿಗೆ ಅನುಕಂಪದ ಆಧಾರದ ಉದ್ಯೋಗವನ್ನು ನೀಡಲು ಅವಕಾಶವಿದೆ. ಈ ರೀತಿಯ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೆಲ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ. ಹಾಗಾದ್ರೇ ಚೆಕ್ ಲೀಸ್ಟ್ ಏನು ಅಂತ ಮುಂದಿದೆ ಓದಿ.
ಅನುಂಕಪದ ಆಧಾರದ ಮೇಲೆ ನೇಮಕಾತಿ ಪ್ರಸ್ತಾವನೆ ಸಲ್ಲಿಸಲು ನಮೂನೆ-1ರಲ್ಲಿ ನಿಯಮ-5ರ ಅನ್ವಯದಂತೆ ಅರ್ಜಿಯನ್ನು ಸಲ್ಲಿಸಬೇಕು. ಆ ಬಳಿಕ ನಮೂನೆ-2ರಂತೆ ವರದಿಯನ್ನು ಕೂಡ ನೀಡಬೇಕಾಗಿದೆ. ಸರ್ಕಾರಿ ನೌಕರನು ಮರಣ ಹೊಂದಿದ ದಿನಾಂಕ, ಅಭ್ಯರ್ಥಿಯ ಜನ್ಮ ದಿನಾಂಕ ಸೇರಿದಂತೆ ಇತರೆ ಮಾಹಿತಿಯನ್ನು ನೀಡಬೇಕಿದೆ.
ಹೀಗಿದೆ ಅನುಕಂಪದ ಆಧಾರದ ನೇಮಕಾತಿಗೆ ಸಲ್ಲಿಸಬೇಕಾದ ದಾಖಲೆಯ ಚೆಕ್ ಲೀಸ್ಟ್
- ಅಭ್ಯರ್ಥಿಯು ಸರ್ಕಾರಿ ನೌಕರನು ಮರಣ ಹೊಂದಿದ ಒಂದು ವರ್ಷದಲ್ಲಿ ನಿಯಮ 5ರಡಿ ಅರ್ಜಿ ಸಲ್ಲಿಸುವುದು
- ಎಸ್ ಎಸ್ ಎಲ್ ಸಿ ಅಂಕ ಪಟ್ಟಿ
- ಪಿಯುಸಿ ಅಂಕಪಟ್ಟಿ
- ಪದವಿ ತೇರ್ಗಡೆ ಅಂಕಪಟ್ಟಿ
- ನಿಯಮ 4(3)ರಡಿ ಅಭ್ಯರ್ಥಿಯ ವಿದ್ಯಾರ್ಹತೆ ಮಾಹಿತಿ ಸಲ್ಲಿಸುವುದು
- ದಿವಂಗತ ಸರ್ಕಾರಿ ನೌಕರನ ಮರಣ ಪ್ರಮಾಣ ಪತ್ರ
- ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರ ಪತ್ರ
- ಅಭ್ಯರ್ಥಿಗೆ ಮೃತ ಸರ್ಕಾರಿ ನೌಕರನ ಜೊತೆಗಿರುವಂ ಸಂಬಂಧದ ದಾಖಲೆ
- ನಿಯಮ 4(1)ರ ಅನ್ವಯ ವಾರ್ಷಿಕ ಆದಾಯ ಪ್ರಮಾಣ ಪತ್ರ
- ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ನೀಡುವ ಪ್ರಮಾಣ ಪತ್ರ
- ಅಭ್ಯರ್ಥಿಯ ನೇಮಕಾತಿ ಬಗ್ಗೆ ಯಾವುದೇ ಅಭ್ಯಂತರವಿಲ್ಲವೆಂದು ಕುಟುಂಬದ ಸದಸ್ಯರ ಒಪ್ಪಿಗೆ ಪತ್ರ.
- ಅಭ್ಯರ್ಥಿಯ ಮೇಲೆ ಕ್ರಿಮಿನಲ್ ಪ್ರಕರಣವಿಲ್ಲವೆಂದು ಪೊಲೀಸರು ನೀಡುವ ವರದಿ
- ಮೃತ ಸರ್ಕಾರಿ ನೌಕರನ ಕುಟುಂಬದ ಸದಸ್ಯರು ಸರ್ಕಾರಿ, ಅರೆ ಸರ್ಕಾರಿ ನೌಕರಿ ಮಾಡುತ್ತಿದ್ದಾರೆಯೇ? ಎನ್ನುವ ಬಗ್ಗೆ ತಹಶೀಲ್ದಾರ್ ನೀಡುವ ಪ್ರಮಾಣ ಪತ್ರ
- ಅಭ್ಯರ್ಥಿಯು ಮೃತ ಸರ್ಕಾರಿ ನೌಕರನ ವಿಧವೆ ಹೆಂಡತಿ ಆಗಿದ್ದಲ್ಲಿ ಮರು ಮದುವೆಯಾಗದೇ ಇರುವ ಬಗ್ಗೆ ತಹಶೀಲ್ದಾರ್ ನೀಡುವ ಪ್ರಮಾಣ ಪತ್ರ
- ಅಭ್ಯರ್ಥಿಯು ಮೃತ ಸರ್ಕಾರಿ ನೌಕರನ ಮಗಳಾಗಿದ್ದಲ್ಲಿ ಅಥವಾ ಸಹೋದರ, ಸಹೋದರಿ ಇದ್ದಲ್ಲಿ ಅವಿವಾಹಿತರಾಗಿರುವ ಬಗ್ಗೆ ನಿಯಮ 3(2)ರ ಅನ್ವಯ ತಹಶೀಲ್ದಾರ್ ನೀಡುವ ಪ್ರಮಾಣ ಪತ್ರ
- ಅರ್ಜಿದಾರರ ನಡತೆಯ ಬಗ್ಗೆ ಸ್ಥಳೀಯ ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡತೆ ಪ್ರಮಾಣ ಪತ್ರ
- ಮೃತ ಸರ್ಕಾರಿ ನೌಕರನ ಸೇವಾ ಪುಸ್ತಕದ ದಾಖಲೆ
- ಕುಟುಂಬ ಪಿಂಚಣಿ ಮಂಜೂರಾತಿ ಬಗ್ಗೆ ದಾಖಲೆ
- ಎಸ್ ಎಸ್ ಎಲ್ ಸಿ ಹಾಗೂ ಉನ್ನತ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ, ದ್ವಿತೀಯ ಭಾಷೆ, ಶಿಕ್ಷಣ ಮಾಧ್ಯಮ ಕನ್ನಡ ತೆಗೆದುಕೊಂಡು ತೇರ್ಗಡೆ ಬಗ್ಗೆ ಪ್ರಮಾಣ ಪತ್ರ
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಈ ಹಂತ ಅನುಸರಿಸಿ, ಮನೆಯಲ್ಲೇ ‘ಬಕೆಟ್’ನಲ್ಲಿ ‘ಅಣಬೆ’ ಬೆಳೆಯಿರಿ | Mushrooms
SHOCKING : ನಾಯಿಗೆ ಮುದ್ದು ಮಾಡುವ ನೆಪದಲ್ಲಿ, ಯುವತಿಯ ಮೈ-ಕೈ ಮುಟ್ಟಿ ‘ಲೈಂಗಿಕ ಕಿರುಕುಳ’ ನೀಡಿದ ಕಾಮುಕ!








