ಕಲಬುರ್ಗಿ: ಆರ್ ಎಸ್ ಎಸ್ ತೆರಿಗೆ ವಂಚನೆ, ಕೆ ಕೆ ಆರ್ ಡಿ ಬಿಯಿಂದ ಲೂಟಿಯ ಬಗ್ಗೆ ದಾಖಲೆ ಸಹಿತ ಮಾಹಿತಿ ಬಿಡುಗಡೆ ಮಾಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನಾವು ಆರ್ ಎಸ್ ಎಸ್ ಪಥಸಂಚಲನದ ಬಗ್ಗೆ ವಿರೋಧ ಮಾಡಿಲ್ಲ. ಆದರೇ ಅನುಮತಿಯನ್ನು ಪಡೆದುಕೊಂಡು ಪಥಸಂಚಲನ ಮಾಡಿ ಎಂದು ಹೇಳಿದ್ದೇವೆ ಎಂದರು.
ಇಂದು ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ಕೊಟ್ಟವರು ನಾವು. ಎಷ್ಟು ಮಂದಿ ಭಾಗಿಯಾಗಬೇಕು. ಮಾರ್ಗ ಎಲ್ಲಿಂದ ಎಲ್ಲಿಗೆ ಇರಬೇಕು ಎಂದು ಹೇಳಿದ್ದೇವೆ. ಇದರಲ್ಲಿ ಗೊಂದಲವೇನಿದೆ ಎಂಬುದಾಗಿ ಪ್ರಶ್ನಿಸಿದರು.
ಕಲಬುರ್ಗಿಯ ಚಿತ್ತಾಪುರದ ಆರ್ ಎಸ್ ಎಸ್ ಪಥಸಂಚಲನಕ್ಕೆ 3 ಲಕ್ಷ ಬರ್ತೀವಿ ಅಂದ್ರು ಬಂದ್ರಾ? ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರು ಬರ್ತೀವಿ ಅಂದ್ರು ಬಂದಿದ್ದಾರಾ? ಯಾರು ಬಂದಿಲ್ಲ. ಯಾವುದೇ ಪ್ರಮುಖ ನಾಯಕರಿಲ್ಲದೇ ಚಿತ್ತಾಪುರದಲ್ಲಿ ಪಥಸಂಚನ ನಡೆಯುತ್ತಿದೆ ಎಂದರು.
ಆರ್ ಎಸ್ ಎಸ್ ನೋಂದಣಿಯೇ ಆಗದ ಸಂಸ್ಥೆ. ಈ ಆರ್ ಎಸ್ ಎಸ್ ದೇಣಿಗೆ ರೂಪದಲ್ಲಿ ಲೂಟಿಯನ್ನೇ ಮಾಡುತ್ತಿದೆ. ಆ ಮೂಲಕ ದೇಶದಲ್ಲಿ ತೆರಿಗೆ ವಂಚನೆ ಮಾಡುತ್ತಿದೆ. ಆರ್ ಎಸ್ ಎಸ್ ತೆರಿಗೆ ವಂಚನೆ, ಕೆ ಕೆ ಆರ್ ಡಿ ಬಿ ಲೂಟಿಯ ಬಗ್ಗೆ ದಾಖಲೆ ಸಹಿತ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ: ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ
SHOCKING : ನಾಯಿಗೆ ಮುದ್ದು ಮಾಡುವ ನೆಪದಲ್ಲಿ, ಯುವತಿಯ ಮೈ-ಕೈ ಮುಟ್ಟಿ ‘ಲೈಂಗಿಕ ಕಿರುಕುಳ’ ನೀಡಿದ ಕಾಮುಕ!








