ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಹಾರದಲ್ಲಿ ಮತದಾರರ ಪಟ್ಟಿಯಿಂದ 47 ಲಕ್ಷ ಜನರನ್ನು ತೆಗೆದಿದ್ದಾರೆ. ಬಿಹಾರದಲ್ಲಿ ಮತದಾರರ ಪಟ್ಟಿಗೆ 18 ಲಕ್ಷ ಜನರನ್ನು ಸೇರಿಸಿದ್ದರು. ವಿಧಾನಸಭಾ ಚುನಾವಣೆಗೂ ಮೊದಲು 1 ಕೋಟಿ ಜನರಿಗೆ ಹಣ ನೀಡಿದ್ದಾರೆ. ಒಂದು ಕೋಟಿ ಜನರ ಖಾತೆಗೆ ತಲಾ 10,000 ಹಣ ಹಾಕಿದ್ದರು. ಕೇಂದ್ರ ಸರ್ಕಾರದ ಜೊತೆಗೆ ಚುನಾವಣಾ ಆಯೋಗ ಶಾಮೀಲಾಗಿದೆ ಎಂಬುದಾಗಿ ಆರೋಪಿಸಿದರು.
ಕೇಂದ್ರ ಚುನಾವಣಾ ಆಯೋಗವೇ ಬಿಜೆಪಿ ಜೊತೆಗೆ ಸೇರಿಕೊಂಡಾಗ ಕಳ್ಳನನ್ನು ಹಿಡಿಯುವವರು ಯಾರು ಎಂಬುದಾಗಿ ಪ್ರಶ್ನಿಸಿದಂತ ಸಚಿವ ರಾಮಲಿಂಗಾರೆಡ್ಡಿ, ಚುನಾವಣಾ ಆಯೋಗದ ನಡೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.
ಸಿಎಂ ಸ್ಥಾನದಿಂದ ‘ಸಿದ್ಧರಾಮಯ್ಯ’ ತೆಗೆದ್ರೆ ಕ್ರಾಂತಿ ಫಿಕ್ಸ್: ವಾಟಾಳ್ ನಾಗರಾಜ್
ಈ ಹಂತ ಅನುಸರಿಸಿ, ಮನೆಯಲ್ಲೇ ‘ಬಕೆಟ್’ನಲ್ಲಿ ‘ಅಣಬೆ’ ಬೆಳೆಯಿರಿ | Mushrooms








