ಮೈಸೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ಕ್ರಾಂತಿ ಕೇಳಬಹುದು. ಆದರೇ ಅದು ಆಗುವುದಿಲ್ಲ. ಅದು ಸಿಎಂ ಸ್ಥಾನದಿಂದ ಸಿದ್ಧರಾಮಯ್ಯ ತೆಗೆದಾಗ ಮಾತ್ರ ಫಿಕ್ಸ್ ಎಂಬುದಾಗಿ ಸಿಎಂ ಪರವಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 2028ರ ಚುನಾವಣೆಗೂ ಸಿಎಂ ಸಿದ್ಧರಾಮಯ್ಯನವರೇ ಇರಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯನಷ್ಟು ಸಮರ್ಥ ವ್ಯಕ್ತಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಇಲ್ಲ ಎಂಬುದಾಗಿ ತಿಳಿಸಿದರು.
ನವೆಂಬರ್ ಕ್ರಾಂತಿ ಕೇಳಬಹುದು. ಆದರೇ ಅದು ಆಗುವುದಿಲ್ಲ. ಸಿದ್ಧರಾಮಯ್ಯ ಬಹಳ ಬುದ್ಧಿವಂತ ವ್ಯಕ್ತಿಯಾಗಿದ್ದಾರೆ. ಸಿಎಂ ಸ್ಥಾನದಿಂದ ಸಿದ್ಧರಾಮಯ್ಯನವರನ್ನು ತೆಗೆದರೇ ಮಾತ್ರ ಕ್ರಾಂತಿಯಾಗಲಿದೆ. ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಭದ್ರವಾಗಿ ಇರುತ್ತಾರೆ ಎಂದರು.
ಈ ಹಂತ ಅನುಸರಿಸಿ, ಮನೆಯಲ್ಲೇ ‘ಬಕೆಟ್’ನಲ್ಲಿ ‘ಅಣಬೆ’ ಬೆಳೆಯಿರಿ | Mushrooms








