ಮಂಡ್ಯ: ರಾಜ್ಯದಲ್ಲಿ ಸರ್ಕಾರಿ ಸಭೆ, ಸಮಾರಂಭ, ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಸುವಂತಿಲ್ಲ. ಬದಲಾಗಿ ಪರಿಸರ ಸ್ನೇಹಿಯಾದಂತ ವಸ್ತುಗಳನ್ನು ಬಳಕೆ ಮಾಡುವಂತೆ ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದರು. ಆದರೇ ಸರ್ಕಾರದ ಆದೇಶಕ್ಕೆ ಅಧಿಕಾರಿಗಳು ಡೋಂಟ್ ಕೇರ್ ಎನ್ನುವಂತೆ ಮಂಡ್ಯದಲ್ಲಿ ಕೆಡಿಪಿ ಸಭೆಯಲ್ಲೇ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಕೆ ಮಾಡಿರುವುದು ಕಂಡು ಬಂದಿದೆ.
ಹೌದು ಮಂಡ್ಯದ ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಕೆಡಿಪಿ ಸಭೆಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟೆಲ್ ಬಳಕೆ ಮಾಡಲಾಗಿದೆ. ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆಯುತ್ತಿರುವ ಸಭೆ ಇದಾಗಿದೆ.
ಮದ್ದೂರು ಶಾಸಕ ಕೆ.ಎಂ.ಉದಯ್ ಹಾಗೂ ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಅವರ ನೇತೃತ್ವದಲ್ಲಿ ನಡೆದಂತ ಕೆಡಿಪಿ ಸಭೆಯಲ್ಲೇ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಕೆ ಮಾಡಲಾಗಿದೆ.
ಸರ್ಕಾರಿ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿರುವ ಸರ್ಕಾರ ಆದೇಶಿಸಿತ್ತು. ಇದೀಗ ಸರ್ಕಾರದ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು ಸರ್ಕಾರಿ ಸಭೆಯಲ್ಲೇ ಪ್ಲಾಸ್ಟಿಕ್ ನೀರಿನ ಬಳಕೆ ಮಾಡಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
BIG NEWS: ರಾಜ್ಯ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್: 8 ರಿಂದ 12 ಸಚಿವರು ಔಟ್?
ಸಾಲುಮರದ ತಿಮ್ಮಕ್ಕ ಗೌರವಾರ್ಥ 114 ಸ್ಥಳದಲ್ಲಿ 114 ವೃಕ್ಷ ನೆಡಲಾಗುತ್ತೆ: ಸಚಿವ ಈಶ್ವರ್ ಖಂಡ್ರೆ








