ಶಿವಮೊಗ್ಗ: ಬಿಹಾರ ವಿಧಾನಸಭೆಯಲ್ಲಿ ಎನ್ ಡಿ ಎ ಭರ್ಜರಿ ಗೆಲುವು ಸಾಧಿಸಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರದಂದು ಸಾಗರದಲ್ಲಿ ಬಿಜೆಪಿಯಿಂದ ಸಾಗರ ಹೋಟೆಲ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ವೇಳೆ ಮಾತನಾಡಿದಂತ ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಮತದಾರರ ಸೆಳೆಯಲು ಅನೇಕ ಗಿಮಿಕ್ ಮಾಡಿಯೂ ವಿಫಲವಾಗಿದೆ. ಬಿಹಾರದ ಪ್ರಜ್ಞಾವಂತ ಮತದಾರ ನರೇಂದ್ರ ಮೋದಿ ಅವರು ರಾಷ್ಟçಕ್ಕೆ ನೀಡಿರುವ ಸಮರ್ಥ ನಾಯಕತ್ವ ಹಾಗೂ ಬಿಹಾರದಲ್ಲಿನ ಎನ್.ಡಿ.ಎ. ಮೈತ್ರಿಕೂಟದ ಕಾರ್ಯವೈಖರಿಗೆ ಮನಸೋತು ತಮ್ಮ ಮತ ನೀಡಿದ್ದಾರೆ ಎಂದರು.
ರಾಹುಲ್ ಗಾಂಧಿ ಮೀನು ಹಿಡಿಯುವ ನಾಟಕ ಮಾಡಿದ್ದು ಜನರಿಗೆ ಅರ್ಥವಾಗಿದೆ. ಸರ್ಕಾರಿ ಉದ್ಯೋಗ, ಮಹಿಳೆಯರ ಖಾತೆಗೆ ಹಣ ಸೇರಿ ಅನೇಕ ಆಮೀಷಗಳನ್ನು ಮತದಾರರಿಗೆ ಒಡ್ಡಲಾಗಿತ್ತು. ಆದರೆ ಇದೆಲ್ಲಾ ಸುಳ್ಳು ಭರವಸೆ ಎನ್ನುವುದನ್ನು ಮನಗಂಡ ಮತದಾರ ಮಹಾಘಟಬಂಧನ್ಗೆ ಬೆಂಬಲ ನೀಡಿದೆ ಅತ್ಯಂತ ಕೆಳಹಂತಕ್ಕೆ ತಲುಪುವಂತೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಶ್ಚಿಮ ಬಂಗಾಲ, ಕರ್ನಾಟಕದಲ್ಲೂ ಬಿಜೆಪಿ ನೇತೃತ್ವದ NDA ಅದ್ವಿತೀಯ ಸಾಧನೆ ಮಾಡಲಿದೆ ಎಂದು ಹೇಳಿದರು.
ಸಾಗರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ಮಾತನಾಡಿ, ಒಂದು ಕಾಲದಲ್ಲಿ ಜಂಗಲ್ ರಾಜ್ ಎಂದೆ ಕರೆಸಿಕೊಳ್ಳುತ್ತಿದ್ದ ಬಿಹಾರವನ್ನು ಮಂಗಲ ರಾಜ್ ಮಾಡಿದ್ದು ಬಿಜೆಪಿ ನೇತೃತ್ವದ ಎನ್.ಡಿ.ಎ. ಎನ್ನುವುದು ಗಮನಾರ್ಹ. ಎಲ್ಲ ವಿಷಯಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಪ್ರಿಯಾಂಕ ಖರ್ಗೆ ಬಿಲ ಸೇರಿ ಕೊಂಡಿದ್ದಾರೆ. ನಾನು ಹೋದರೆ ಕಾಂಗ್ರೇಸ್ ಖಂಡಿತಾ ಸೋಲುತ್ತದೆ ಎನ್ನುವ ಖಚಿತತೆ ರಾಹುಲ್ ಗಾಂಧಿ ಅವರಿಗೆ ಇದೆ. ಕೆಲವರು ಗಾಂಧಿ ಫ್ಯಾಮಿಲಿ ನಂಬಿ ರಾಜಕೀಯ ಮಾಡುತ್ತಿದ್ದಾರೆ. ದೇಶದ ಎಲ್ಲ ಭಾಗದಲ್ಲೂ ನರೇಂದ್ರ ಮೋದಿ ಅವರ ಜನಪ್ರಿಯತೆ ಇದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಧುರಾ ಶಿವಾನಂದ್ ಮಾತನಾಡಿ, ಬಿಹಾರ ಚುನಾವಣೆ ಫಲಿತಾಂಶ ಪಕ್ಷದ ಕಾರ್ಯಕರ್ತರ ಜಯವಾಗಿದೆ. ಹಿಂದೆಂದೂ ಕಾಣದಂತಹ ರೀತಿಯಲ್ಲಿ ಬಿಹಾರ ಮತದಾರರು ಫಲಿತಾಂಶ ನೀಡಿದ್ದಾರೆ. ನರೇಂದ್ರ ಮೋದಿ ಅವರ ತಾಯಿಗೆ ಅಗೌರವ ತೋರಿಸಿದ್ದಕ್ಕೆ ಬಿಹಾರ ಮತದಾರರು ಮಹಾಘಟಬಂಧನ್ ನಾಯಕರಿಗೆ ತಕ್ಕಪಾಠ ಕಲಿಸಿದ್ದಾರೆ ಎಂದು ತಿಳಿಸಿದರು.
ಈ ವೇಳೆ ದೇವೇಂದ್ರಪ್ಪ ಯಲಕುಂದ್ಲಿ, ಮೈತ್ರಿ ಪಾಟೀಲ್, ಸಂತೋಷ್ ಶೇಟ್, ಪರಶುರಾಮ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರೇಮಾ ಸಿಂಗ್, ಜಗನ್ನಾಥ್ ಶೇಟ್, ವಿನೋದ್ ರಾಜ್, ವಿ.ಮಹೇಶ್, ಗೋಪಾಲ, ಪ್ರದೀಪ್ ಆಚಾರಿ, ಸುಜಯ್ ಶೇಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನೀರಿಗೂ ‘ಎಕ್ಸ್ ಪೈರಿ ಡೇಟ್’ ಇರುತ್ತಾ? ಶೇಖರಿಸಿಟ್ಟಿದ್ದು ಎಷ್ಟು ಕಾಲ ಉಳಿಯುತ್ತದೆ?
BREAKING : ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ನಿಗೂಢ ಸಾವು : ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ








