ಉಳ್ಳಾಲ : ರಾಜ್ಯದಲ್ಲಿ ಬೀದಿ ನಾಯಿ ದಾಳಿಗೆ ಮತ್ತೊಂದು ಬಲಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು ಕುಂಪಲ ಬೈಪಾಸ್ ನಲ್ಲಿರುವ ಮನೆಯೊಂದರ ಅಂಗಳದಲ್ಲಿ ನಡೆದಿದೆ.
ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ (54) ಮೃತರು. ಅಂಗಡಿಯೊಂದರ ಎದುರು ಮಲಗಿದ್ದ ಅವರ ಮೇಲೆ ಬೆಳಗ್ಗೆ 3 ರಿಂದ 4 ಗಂಟೆ ಹೊತ್ತಿಗೆ ಬೀದಿ ನಾಯಿ ದಾಳಿ ನಡೆಸಿದ್ದು, ಅವರು ರಸ್ತೆ ಬದಿಯಿಂದ ತಪ್ಪಿಸಿಕೊಂಡು ಪಕ್ಕದ ಮನೆಯೊಂದಕ್ಕೆ ಹೋದರೂ ಅಟ್ಟಿಸಿಕೊಂಡು ಬಂದು ದಾಳಿ ಮಾಡಿದೆ.
ಬೆಳಗ್ಗೆ ಮನೆ ಅಂಗಳದಲ್ಲಿ ದಯಾನಂದ ಮೃತದೇಹ ಪತ್ತೆಯಾಗಿದೆ. ನಾಯಿ ಕೂಡಾ ಮೃತದೇಹದ ಮೇಲೆ ಕುಳಿತು ರಕ್ತ ನೆಕ್ಕುತ್ತಲೇ ಇತ್ತು. ಓಡಿಸಿದರೂ ನಾಯಿ ತೆರಳಿರಲಿಲ್ಲ. ಪೊಲೀಸರು ನಾಯಿಯನ್ನು ವಶಕ್ಕೆ ಪಡೆದು ಅದರ ಮುಖದಲ್ಲಿ ಮೆತ್ತಿಕೊಂಡಿದ್ದ ರಕ್ತ ಮಾದರಿಗಳೆಲ್ಲವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.








