ಬೆಂಗಳೂರು: ಇಂದು ರಾಜ್ಯಾಧ್ಯಂತ ಸರ್ಕಾರಿ ರಜೆ ಇರುವುದಿಲ್ಲ. ಕೇವಲ ಸರ್ಕಾರಿ ಗೌರವಗಳೊಂದಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಗೆ ಆದೇಶಿಸಲಾಗಿದೆ ಎಂಬುದಾಗಿ ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ.
ನವೆಂಬರ್ 15 ರಂದು ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಸಾಲು ಮರದ ತಿಮ್ಮಕ್ಕ ಅವರ ನಿಧನದ ಕಾರಣದಿಂದಾಗಿ ಸರ್ಕಾರಿ ರಜೆ ಘೋಷಿಸಲಾಗಿದೆ ಎನ್ನುವಂತ ಆದೇಶ ಪತ್ರವೊಂದು ವೈರಲ್ ಆಗಿತ್ತು. ಆದರೇ ಇದು ಎಸ್ ಎಂ ಕೃಷ್ಣ ಅವರು ಮರಣ ಹೊಂದಿದ ಆದೇಶವನ್ನು ತಿರುಚಿ ಹಾಕಲಾಗಿದೆ. ಆ ಆದೇಶದ ಕೆಳಗೆ ಸಹಿ ಮಾಡಿದ ಅಧಿಕಾರಿಯು ಪ್ರಸ್ತುತ ಆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದಾಗಿ ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ವೃಕ್ಷಮಾತೆ ನಾಡೋಜ, ಪದ್ಮಶ್ರೀ ಪುರಸ್ಕೃತರು ಹಾಗೂ ಕರ್ನಾಟಕದ ಪರಿಸರ ರಾಯಭಾರಿ ಡಾ.ಸಾಲುಮರದ ತಿಮ್ಮಕ್ಕ ಅವರು ದಿನಾಂಕ 14-11-2025ರಂದು ನಿಧನರಾಗಿರುತ್ತಾರೆ. ಅವರ ನಿಧನಕ್ಕೆ ಸರ್ಕಾರವು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರವು ಆದೇಶಿಸಿದೆ. ಆದರೇ ಇಂದು ರಾಜ್ಯಾಧ್ಯಂತ ಸರ್ಕಾರಿ ರಜೆಯನ್ನು ಘೋಷಿಸಿಲ್ಲ ಎಂಬುದಾಗಿ ಸರ್ಕಾರ ತಿಳಿಸಿದೆ.









