ಬೆಂಗಳೂರು: ಹಿರಿಯ ಪತ್ರಕರ್ತ, ಕಲಾವಿದ ಬಾವು ಪತ್ತಾರ್ ಅವರು ನಿಧನರಾಗಿದ್ದಾರೆ. ಆ ಮೂಲಕ ಹಿರಿಯ ಪತ್ರಕರ್ತ, ಕಲಾವಿದ ಇನ್ನಿಲ್ಲವಾಗಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಪ್ರಜಾವಾಣಿ ಹಿರಿಯ ಪತ್ರಕರ್ತ&ಕಲಾವಿದ ಬಾವು ಪತ್ತಾರ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ ವ್ಯಕ್ತಪಡಿಸಿದೆ ಎಂದಿದ್ದಾರೆ.
ಸರಳ ಸಜ್ಜನಿಕೆಯ ಪತ್ತಾರ್, ಗ್ರಾಫಿಕ್ ಡಿಸೈನರ್ ಆಗಿ ಗಮನ ಸೆಳೆದವರು. ಅವರ ಅಗಲಿಕೆಯಿಂದ ಸುದ್ದಿಮನೆಯ ಪ್ರತಿಭಾವಂತ ಕೊಂಡಿಯೊಂದು ಕಳಚಿದೆ ಎಂದು ಶೋಕಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಪ್ರಜಾವಾಣಿ ಹಿರಿಯ ಪತ್ರಕರ್ತ&ಕಲಾವಿದ ಬಾವು ಪತ್ತಾರ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ ವ್ಯಕ್ತಪಡಿಸಿದೆ. ಸರಳ ಸಜ್ಜನಿಕೆಯ ಪತ್ತಾರ್, ಗ್ರಾಫಿಕ್ ಡಿಸೈನರ್ ಆಗಿ ಗಮನ ಸೆಳೆದವರು. ಅವರ ಅಗಲಿಕೆಯಿಂದ ಸುದ್ದಿಮನೆಯ ಪ್ರತಿಭಾವಂತ ಕೊಂಡಿಯೊಂದು ಕಳಚಿದೆ ಎಂದು ಶೋಕಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು,ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. pic.twitter.com/0R4qkKYeeh
— Karnataka Union of Working Journalists (R) (@KUWJ_R) November 14, 2025








