ಬೆಂಗಳೂರು: ನಗರದ ಶಾಂತಿನಗರ ಕ್ರೀಡಾ ಸಂಕೀರ್ಣದಲ್ಲಿ ಶಟಲ್ ಬ್ಯಾಡ್ಮಿಂಟನ್, ಕೇರಂ, ಚೆಸ್ ಮತ್ತು ಟೇಬಲ್ ಟೆನ್ನಿಸ್ ಆಡುವ ಮೂಲಕ ನೌಕರರಿಗೆ ಪ್ರೋತ್ಸಾಹಿಸಿ ಕ್ರೀಡಾ ಸ್ಪರ್ಧೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಕೆಎಸ್ ಆರ್ ಟಿ ಸಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರುಗಳಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ಅಧಿಕಾರಿ/ ಸಿಬ್ಬಂದಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಗಮದಲ್ಲಿ ಅಧಿಕಾರಿ/ಸಿಬ್ಬಂದಿಗಳ ಉತ್ತಮ ಆರೋಗ್ಯ, ಒತ್ತಡ ನಿವಾರಣೆ ಹಾಗೂ ಕ್ರೀಡಾ ಮನೋರಂಜನೆಗಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಪ್ರತಿ ವರ್ಷವು ಘಟಕ, ವಿಭಾಗ, ಪ್ರಾದೇಶಿಕ ಕಾರ್ಯಗಾರ ಮತ್ತು ಕೇಂದ್ರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರು ಹಾಗೂ ಅವರ ಮಕ್ಕಳಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಈ ಸಂಬಂಧ ಕ್ರೀಡಾ ಮತ್ತು ಸಾಂಸ್ಕೃತಿಕ ನಿಧಿಯಿಂದ ವಿಭಾಗ/ಕಾರ್ಯಾಗಾರಗಳಿಗೆ ತಲಾ ರೂ. 40,000/- ರಂತೆ 17 ವಿಭಾಗಗಳಿಗೆ ಎರಡು ಕಾರ್ಯಾಗಾರಗಳಿಗೆ ಅನುದಾನವನ್ನು ಪ್ರತಿ ವರ್ಷ ಬಿಡುಗಡೆ ಮಾಡಲಾಗಿದೆ. ಕಳೆದ ವರುಷವಷ್ಟೇ ಸದರಿ ಕ್ರೀಡಾ ಸಂಕೀರ್ಣವನ್ನು ಮೇಲ್ದರ್ಜೆಗೇರಿಸಲಾಗಿತ್ತು. ನೌಕರರು ಪ್ರತಿನಿತ್ಯ ಈ ಕ್ರೀಡಾ ಸಂಕೀರ್ಣವನ್ನು ಕೆಲವೊಂದು ಆಟಗಳನ್ನು ನಿತ್ಯ ಆಡುವ ಮೂಲಕ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗೆಲುವು ಸೋಲು ಮುಖ್ಯವಲ್ಲ, ಭಾಗವಹಿಸುವಿಕೆ ಎಂಬುದು ಪ್ರಮುಖವಾದ್ದದ್ದು. ನೌಕರರು ಅತೀ ಒತ್ತಡದ ಕಾರ್ಯಶೈಲಿಯಲ್ಲಿ ಈ ರೀತಿಯ ಚಟುವಟಿಕೆ ಆಹ್ಲಾದಕರ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಸದರಿ ಕಾರ್ಯಕ್ರಮದಲ್ಲಿ ನೌಕರರಿಗೆ ಮತ್ತು ಅಧಿಕಾರಿಗಳಿಗೆ ಚೆಸ್, ಕೇರಂ, ಶೆಟಲ್, ಟೇಬಲ್ ಟೆನ್ನಿಸ್ , ಸಂಗೀತ ಸ್ಪರ್ಧೆಗಳು, ಸಂಗೀತ ಕುರ್ಚಿ, ಗುಂಡು ಎಸೆತ, ವೇಗ ನಡಿಗೆ, ಮಡಿಕೆ ಹೊಡೆಯುವ ಆಟ ಇತ್ಯಾದಿಗಳನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಎಂಡಿ ಅಕ್ರಂ ಪಾಷ, ಸಿಬ್ಬಂದಿ ಮತ್ತು ಜಾಗೃತದ ನಿರ್ದೇಶಕಿ ಡಾ. ನಂದಿನಿ ದೇವಿ ಕೆ ಸೇರಿದಂತೆ ನಿಗಮದ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
BIG NEWS: ಕೆಲಸದ ಸ್ಥಳದಲ್ಲಿ ‘ಪ್ರೇಮ-ಪ್ರಣಯ’ದಲ್ಲಿ ಭಾರತವು ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ: ಅಧ್ಯಯನ
2 ದಶಕದಲ್ಲಿ ಜಗತ್ತಿನಾದ್ಯಂತ 1600 ಪತ್ರಕರ್ತರ ಹತ್ಯೆಗೆ KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆತಂಕ








