ಬೆಂಗಳೂರು: KSET-25ರ ಪರಿಷ್ಕೃತ ಕೀ ಉತ್ತರಗಳನ್ನು KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳಿಂದ ಬಂದ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಿಸಿದ ನಂತರ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ವಿವರಗಳಿಗೆ ವೆಬ್ ಸೈಟ್ http://kea.kar.nic.in ನೋಡಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದಂತ ಹೆಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್)-2025 ಅನ್ನು ದಿನಾಂಕ:02.11.2025 ರಂದು ನಡೆಸಲಾಗಿದ್ದು, ಪತ್ರಿಕೆ-1 ಮತ್ತು ಪತ್ರಿಕೆ-2ರ ಒಟ್ಟು 33 ವಿಷಯಗಳಿಗೆ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ದಿನಾಂಕ:04.11.2025 ಪ್ರಕಟಿಸಿ, ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ:06.11.2025ರಂದು ಸಂಜೆ 3.00 ಗಂಟೆಯೊಳಗೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು ಎಂದಿದ್ದಾರೆ.
ಅದರಂತೆ, ಈ ಕೆಳಕಂಡ 07 ವಿಷಯಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಯಾವುದೇ ಆಕ್ಷೇಪಗಳು ಸ್ವೀಕೃತವಾಗಿಲ್ಲದಿರುವುದರಿಂದ ಇವುಗಳ ಯಾವುದೇ ಉತ್ತರಗಳಲ್ಲಿ ಬದಲಾವಣೆಗಳಿರುವುದಿಲ್ಲ ಎಂಬುದಾಗಿ ಎಂಬುದಾಗಿ ತಿಳಿಸಿದ್ದಾರೆ.
ಉಳಿದಂತೆ ಪತ್ರಿಕೆ-1 ಮತ್ತು 26 ವಿಷಯಗಳ ಬಗ್ಗೆ ಅಭ್ಯರ್ಥಿಗಳಿಂದ ಅಕ್ಷೇಪಣೆಗಳು ಸ್ವೀಕೃತವಾಗಿವೆ. ಸ್ವೀಕೃತವಾದ ಎಲ್ಲಾ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯು ಪರಿಶೀಲಿಸಿದ್ದು, ವಿಷಯ ತಜ್ಞರ ಸಮಿತಿಯ ಶಿಫಾರಸ್ಸಿನಂತೆ ವಿಷಯವಾರು ಪರಿಷ್ಕೃತ ಕೀ ಉತ್ತರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ
ಪ್ರಕಟಿಸಲಾಗಿದೆ.
ಸೂಚನೆ : ಕೆಸೆಟ್-2025ರ ಎಲ್ಲಾ ಪತ್ರಿಕೆಗಳಲ್ಲಿ ಅಭ್ಯರ್ಥಿಗಳಿಂದ ಅಕ್ಷೇಪಣೆಗಳು ಸ್ವೀಕೃತವಾಗಿ, ಪರಿಷ್ಕೃತ ಕೀ ಉತ್ತರಗಳು ಪ್ರಕಟಗೊಂಡ ಪ್ರಶ್ನೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಪ್ರಶ್ನೆಗಳ ಕೀ ಉತ್ತರಗಳು ದಿನಾಂಕ:04.11.2025 ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿತವಾದಂತೆಯೇ ಇರುತ್ತವೆ ಎಂಬುದಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
#KSET-25: ಪರಿಷ್ಕೃತ ಕೀ ಉತ್ತರಗಳನ್ನು #KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳಿಂದ ಬಂದ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಿಸಿದ ನಂತರ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.
ವಿವರಗಳಿಗೆ ವೆಬ್ ಸೈಟ್ ನೋಡಬಹುದು.
-ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ pic.twitter.com/28k6ywk4Ie— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) November 13, 2025
‘BEd ವ್ಯಾಸಂಗ’ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: ‘ದಾಖಲೆಗಳ ಪರಿಶೀಲನೆ’ಗೆ ಮತ್ತೊಂದು ಅವಕಾಶ








