ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನ ಸೇರಿದಂತೆ ಮಹತ್ವದ ವಿಚಾರಗಳನ್ನು ಚರ್ಚಿಸಲಾಯಿತು. ಆ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಇಂದಿನ ರಾಜ್ಯ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಇಂದಿನ ಸಂಪುಟ ಸಭೆಯಲ್ಲಿ 18 ವಿಚಾರಗಳ ಬಗ್ಗೆ ಚರ್ಚೆಯಾಯ್ತು. ಒಟ್ಟಾರೆ 20 ವಿಚಾರಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯ್ತು. ಮೇಕೆದಾಟು ಯೋಜನೆ ಅನುಷ್ಠಾನದ ವಿಚಾರಕ್ಕೆ ತಮಿಳು ನಾಡು ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಂಡಿದೆ. ಇದು ಈ ಯೋಜನೆ ವಿಚಾರ ದಲ್ಲಿ ನಮ್ಮ ಮುಂದಿನ ಹೆಜ್ಜೆ ಇಡಲು ಹಸಿರು ನಿಶಾನೆ ಸಿಕ್ಕಂತಾಗಿದೆ. ಈ ಸಂತೋಷಕ್ಕೆ ಸಂಪುಟ ಸಿಎಂ ಹಾಗೂ ಡಿಸಿಎಂ ಅವರನ್ನ ಅಭಿನಂದಿಸಿತು. ಬೆಳಗಾವಿ ಚಳಿಗಾಲದ ಅಧಿವೇಶನ ಡಿಸೆಂಬರ್ 8 ರಿಂದ 19 ರವರೆಗೆ ನಡೆಯಲಿದೆ ಎಂದರು.
ಸಚಿವ ಸಂಪುಟದ ಮೂರು ಉಪಸಮಿತಿಗಳು ( 1.ಕುನ್ಹಾ ಸಮಿತಿ,ಕೋವಿಡ್ , 2. ರಾಜ್ಯದ ವಿವಿಗಳ ಆರ್ಥಿಕ ಪರಿಸ್ಥಿತಿ ಪರಾಮರ್ಶೆ ಸಮಿತಿ, 3. ನೈಸ್ ಯೋಜನೆ ಅನುಷ್ಟಾನ ಪ್ರಗತಿ ಮುಂದಿನ ಕ್ರಮದ ಕುರಿತಾದಸಮಿತಿ) ಆರು ತಿಂಗಳು ಮೀರಿ ವರದಿ ಸಲ್ಲಿಸಿರಲಿಲ್ಲ. ಈ ಸಮಿತಿಗಳು ಶೀಘ್ರವೇ ವರದಿ ಸಲ್ಲಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದರು.
ಮದಲಾಪುರ ಏತ ನೀರಾವರಿ ಯೋಜನೆ ಮುಂದುವರೆದ ಕಾಮಗಾರಿಗೆ 21 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. GBA ವಿಧೇಯಕ 2025 ಕ್ಕೆ ಅನುಮೋದನೆ ನೀಡಲು ತಿದ್ದುಪಡಿ ವಿಧೇಯಕ ಮಂಡನೆ ಮಾಡಲು ಸಂಪುಟ ಒಪ್ಪಿಗೆ ನೀಡಲಾಗಿದೆ. GBA ವ್ಯಾಪ್ತಿಯ 46 ಮೆಕ್ಯಾನಿಕಲ್ ಕಸಗುಡಿಸುವ ಯಂತ್ರಗಳ ಬಳಕೆಗೆ ಸಂಪುಟ ಒಪ್ಪಿಗೆ ನೀಡಲಾಗಿದೆ. 613 ಕೋಟಿ ವೆಚ್ಚದ ಬಾಡಿಗೆಗೆ ಯಂತ್ರಗಳನ್ನು ಏಳು ವರ್ಷದ ಅವಧಿಗೆ ಟೆಂಡರ್ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಬೀದರ್ ನ ಬಾಲ್ಕಿ ಪುರಸಭೆಯನ್ನ ನಗರ ಸಭೆಯನ್ನಾಗಿಸಲು ಸಂಪುಟ ಒಪ್ಪಿಗೆ ನೀಡಲಾಗಿದೆ. ಮೈಸೂರಲ್ಲಿರುವ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಶಾಸಕರ ಸಂಸದರ ಭವನ ನಿರ್ಮಾಣಕ್ಕೆ 15 ಕೋಟಿ ಕಾಮಗಾರಿಗೆ ಒಪ್ಪಿಗೆ ನೀಡಿದ ಸಂಪುಟ ಅನುಮೋದಿಸಿದೆ. ಹಾಸನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 27.92. ಕೋಟಿ ವೆಚ್ಚದ ಉಪಕರಣಗಳ ಖರೀದಿಗೆ ಸಂಪುಟ ಒಪ್ಪಿಗೆ ನೀಡಲಾಗಿದೆ.
GBA ಕಾಯ್ದೆಗೆ ಅನುಮೋದನೆ ನೀಡಲು, ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಿದೆ. ಗ್ರೇಟರ್ ಬೆಂಗಳೂರು ಆಡಳಿತ 23-24ರ ವಿವಿಧ ನಿಯಮ ತಿದ್ದುಪಡಿ ಮಾಡಲಾಗುತ್ತಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಕಾರ್ಯದರ್ಶಿ, ಆರ್ಥಿಕ ಇಲಾಖೆಯನ್ನ ಪ್ರಾಧಿಕಾರದ ಸದಸ್ಯರ ಪಟ್ಟಿಗೆ ಸೇರಿಸುವುದು. ವಿಧಾನಸಭೆ, ವಿಧಾನಪರಿಷತ್ ಸದಸ್ಯರನ್ನ ಪ್ರಾಧಿಕಾರಕ್ಕೆ ಸೇರಿಸಲು ಕಲಂ 5ನ್ನ ಬದಲಿಸುವುದು ಆಗಿದೆ ಎಂದರು.
ವಿಧಾನಸೌಧ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ ನಮ್ಮ ಕಾವೇರಿಯ ಹೋರಾಟ ಮೇಕೆದಾಟುವಿನಿಂದ ಹಾಕಿದ ಹೆಜ್ಜೆಗೆ ಗೆಲುವು ಸಿಕ್ಕಿದೆ. ನಮ್ಮ ನೀರು ನಮ್ಮ ಹಕ್ಕು ಅಂತ ಹೋರಾಟ ಮಾಡಿದ್ವಿ. ಜನ ನಮ್ಮ ಕೈಗೆ ಅಧಿಕಾರ ಕೊಟ್ರು, ವಿರೋಧ ಪಕ್ಷದವರು ಈ ಬಗ್ಗೆ ಹಲವು ವ್ಯಾಖ್ಯಾನ ಮಾಡಿದ್ರು. ಮೇಕೆದಾಟು ಯೋಜನೆಗೆ ಮತ್ತು ಡ್ಯಾಂ ಮಾಡಲು ಅವಕಾಶ ಸಿಕ್ಕಿದೆ. ಮತ್ತೆ ಕೋರ್ಟ್ ಗೆ ಹೋಗಿ ಬೇಡಿಕೆ ಇಡೋ ಅವಶ್ಯಕತೆ ಇದೆ. ಹಾರೋಬೆಲೆಯಲ್ಲಿ ಮೇಕೆದಾಟು ಯೋಜನೆ ಆಫೀಸ್ ಮಾಡಿದ್ದೇವೆ. ಕೇಂದ್ರದ CWC,CWMA, ಮುಂದಿನ ಯೋಜನೆಗೆ ಅಗತ್ಯ ಪರ್ಮಿಷನ್ ನೀಡಬೇಕಾಗತ್ತೆ. ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಎಲ್ಲ ಸಂಸದರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಜಲಶಕ್ತಿ ಸಚಿವರನ್ನೂ ಒಳಗೊಂಡಂತೆ ಎಲ್ಲ ಪ್ರಮುಖರನ್ನ ಭೇಟಿಯಾಗಿ ಬರ್ತೇವೆ ಎಂದರು.
ತಮಿಳುನಾಡಿನವರಲ್ಲೂ ಮನವಿ ಮಾಡ್ತೇನೆ. ಎಲ್ಲರೂ ಸೇರಿ ಯೋಜನೆ ಜಾರಿ ಮಾಡೋಣ. ಕಾನೂನಾತ್ಮಕವಾಗಿ ನಿಮಗೆ ಏನು ಸಿಗಬೇಕೋ ಅದನ್ನ ಕೊಡ್ತೇವೆ. ಯೋಜನೆ ಜಾರಿಗೆ ಹೆಚ್ಚಿನ ಅಧಿಕಾರಿಗಳನ್ನ ನಿಯೋಜನೆ ಮಾಡ್ತೇವೆ. ನಮಗಿಂತ ತಮಿಳುನಾಡಿಗೆ ಈ ಯೋಜನೆ ಸಹಕಾರಿ. ಅವರ ಅಗತ್ಯದ ನೀರು ಬಿಡಲು ಇದು ಸಹಕಾರಿ ಎಂಬುದಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
BREAKING: ಚಿತ್ತಾಪುರದಲ್ಲಿ ‘RSS ಪಥಸಂಚಲನ’ಕ್ಕೆ ಸರ್ಕಾರ ಅನುಮತಿಸಿ ಅಧಿಕೃತ ಆದೇಶ
‘BEd ವ್ಯಾಸಂಗ’ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: ‘ದಾಖಲೆಗಳ ಪರಿಶೀಲನೆ’ಗೆ ಮತ್ತೊಂದು ಅವಕಾಶ








