ಬೆಂಗಳೂರು: ನಗರದಲ್ಲಿ ಭೀಕರ ಕೃತ್ಯವೊಂದು ಬೆಳಕಿಗೆ ಬಂದಿದೆ. ಬೈಕ್ ಒಂದಕ್ಕೆ ಕಾರು ಗುದ್ದಿಸಿ ಕೊಲೆಗೆ ಯತ್ನಿಸಿದಂತ ಘಟನೆ ನಡೆದಿದೆ. ಈ ಇಡೀ ಕೃತ್ಯವು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರಲ್ಲಿ ಕಾರೊಂದು ಬೈಕಿಗೆ ಗುದ್ದಿಸಿ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರನ್ನು ಕೊಲೆಗೆ ಯತ್ನಿಸಿದಂತ ಭೀಕರ ಕೃತ್ಯ ನಡೆದಿದೆ. ಬೈಕ್ ಸವಾರ ಹಾರನ್ ಮಾಡಿದ್ದಕ್ಕೆ ಸಿಟ್ಟಾದಂತ ಕಾರು ಚಾಲಕ, ಆತನನ್ನು ಹತ್ಯೆಗೆ ಯತ್ನಿಸಲಾಗಿದೆ.
ಸಾಫ್ಟ್ ವೇರ್ ಇಂಜಿನಿಯರ್ ಸುಕ್ರುತ್ ಕೇಶವ್ ಎಂಬಾತನಿಂದ ಈ ಕೃತ್ಯವನ್ನು ಎಸಗಲಾಗಿದೆ. ಹಾರ್ನ್ ಮಾಡಿದ್ದಕ್ಕೆ ಬೈಕಿಗೆ ಕಾರು ಗುದ್ದಿಸಿ ಹತ್ಯೆಯನ್ನು ಮಾಡೋದಕ್ಕೆ ಯತ್ನಿಸಿರುವಂತ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಕ್ಟೋಬರ್ 26ರಂದು ನಡೆದಿದ್ದಂತ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕಾರು ಚಾಲಕ ಸುಕ್ರುತ್ ಕೇಶವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರೈಲ್ವೆ ಕಾಮಗಾರಿ ಹಿನ್ನಲೆ: ಮೈಸೂರು ವಿಭಾಗದ ಈ ಎರಡು ಮೆಮು ರೈಲುಗಳ ಸಂಚಾರ ರದ್ದು








