ಬೆಂಗಳೂರು: ನಗರದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆಯಲ್ಲಿ ಬರೋಬ್ಬರಿ 6.97 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಸೀಜ್ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು, ದಿನಾಂಕ 11-11-2025ರಂದು, ಬೆಂಗಳೂರಿನ ಕೆಐಎಯಲ್ಲಿರುವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್‌ನಿಂದ ಆಗಮಿಸುತ್ತಿದ್ದ ಪ್ರಯಾಣಿಕನನ್ನು ತಡೆದು ₹69.60 ಲಕ್ಷ ಮೌಲ್ಯದ 2.760 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡರು. ಪ್ರಯಾಣಿಕನನ್ನು ಎನ್‌ಡಿಪಿಎಸ್ ಕಾಯ್ದೆ, 1985ರ ಅಡಿಯಲ್ಲಿ ಬಂಧಿಸಲಾಗಿದೆ ಎಂದಿದೆ.
On 11.11.2025, #BengaluruCustoms officers at KIA, Bengaluru, intercepted a passenger arriving from Bangkok and seized 2.760 kg of Hydroponic Ganja valued at ₹96.60 lakh. The pax has been arrested under the NDPS Act, 1985.#CBIC #NDPS
— Bengaluru Customs (@blrcustoms) November 13, 2025
ಇನ್ನೂ ನಿನ್ನೆಯ ದಿನಾಂಕ 12-11-2025ರಂದು ಬೆಂಗಳೂರಿನ ಕೆಐಎಯಲ್ಲಿರುವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ₹5.53 ಕೋಟಿ ಮೌಲ್ಯದ 15.79 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಪತ್ತೆ ಹಚ್ಚಿದ್ದಾರೆ. ಈ ವ್ಯಕ್ತಿಗಳನ್ನು ಎನ್‌ಡಿಪಿಎಸ್ ಕಾಯ್ದೆ, 1985ರ ಅಡಿಯಲ್ಲಿ ಬಂಧಿಸಲಾಯಿತು ಎಂಬುದಾಗಿ ತಿಳಿಸಿದೆ.
On 12.11.2025, the #BengaluruCustoms officers at KIA, Bengaluru intercepted two passengers attempting to smuggle 15.79 kgs of Hydroponic Ganja valued at ₹5.53 Crore. The individuals were arrested under the NDPS Act, 1985.#BengaluruCustoms #CBIC
— Bengaluru Customs (@blrcustoms) November 13, 2025
‘ಕೋಳಿ ಫಾರಂ’ ಮಾಡಲು ಹೊರಟವರಿಗೆ ಗುಡ್ ನ್ಯೂಸ್: ‘ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ
BREAKING: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬಿಗ್ ಶಾಕ್: ಪೋಕ್ಸೋ ಕೇಸ್ ಸಮನ್ಸ್ ರದ್ದುಪಡಿಸಲು ಹೈಕೋರ್ಟ್ ನಕಾರ
‘BEd ವ್ಯಾಸಂಗ’ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: ‘ದಾಖಲೆಗಳ ಪರಿಶೀಲನೆ’ಗೆ ಮತ್ತೊಂದು ಅವಕಾಶ








