ಬೆಂಗಳೂರು: ನಗರದಲ್ಲಿ ಸಫಾರಿ ವೇಳೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವಂತ ಘಟನೆ ನಡೆದಿದೆ. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಲ್ಲಿ ಈ ದಾಳಿ ನಡೆದಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಲ್ಲಿ ಸಫಾರಿ ವೇಳೆಯಲ್ಲಿ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದೆ. ಚಿರತೆ ದಾಳಿಯ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
50 ವರ್ಷದ ವಹಿತ ಬಾನು ಎಂಬ ಮಹಿಳೆಯ ಮೇಲೆ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಲ್ಲಿ ಚಿರತೆ ದಾಳಿ ನಡೆಸಿದೆ. ಪತಿ, ಮಗನ ಜೊತೆಗೆ ಸಫಾರಿಗೆ ವಹಿತ ಬಾನು ತೆರಳಿದ್ದರು. ಕೆ ಎಸ್ ಟಿ ಡಿ ಸಿ ವಾಹನದಲ್ಲಿ ಸಫಾರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.
ಸಫಾರಿ ವಾಹನದ ಗ್ಲಾಸ್ ಓಪನ್ ಮಾಡಿ ಚಿರತೆ ನೋಡುತ್ತಿದ್ದಾಗ ಮಹಿಳೆಯ ಮೇಲೆ ದಾಳಿ ನಡೆಸಲಾಗಿದೆ. ಚಿರತೆ ದಾಳಿಯಿಂದಾಗಿ ಮಹಿಳೆಯ ಕೈಗೆ ಗಾಯವಾಗಿದೆ.
ಉದ್ಯೋಗಸ್ಥ ಮಹಿಳೆಯರಿಗೆ ಮಾಸಿಕ 1 ದಿನ ವೇತನ ಸಹಿತ ಮುಟ್ಟಿನ ರಜೆ: ಕಾರ್ಮಿಕ ಇಲಾಖೆ ಆದೇಶ
‘BEd ವ್ಯಾಸಂಗ’ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: ‘ದಾಖಲೆಗಳ ಪರಿಶೀಲನೆ’ಗೆ ಮತ್ತೊಂದು ಅವಕಾಶ








