ಬೆಳಗಾವಿ: ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಡೆಗೆ ಕಾನೂನು ರೂಪಿಸಿದ್ದರೂ, ಕಿರುಕುಳ ಮಾತ್ರ ತಪ್ಪಿಲ್ಲ. ಇದೀಗ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕಡೋಲಿಯಲ್ಲಿ ನಡೆದಿದೆ.
ಬೆಳಗಾವಿ ತಾಲ್ಲೂಕಿನ ಕಡೋಲಿಯಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಸಾತೇರಿ ಹೊನ್ನಪ್ಪ ರುಟಕುಟೆ(78) ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ರೈತ ಸಾತೇರಿ ಹೊನ್ನಪ್ಪ ರುಟಕುಟೆ ಅವರಿಗೆ ಮಣ್ಣೂರು ಗ್ರಾಮದ ಕೋ ಆಪರೇಟಿವ್ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿದೆ.
12 ಲಕ್ಷ ತೆಗೆದುಕೊಂಡಿದ್ದಂತ ಸಾಲದಲ್ಲಿ ಸುಮಾರು 4 ಲಕ್ಷದಷ್ಟು ಮರು ಪಾವತಿ ಮಾಡಿದ್ದರು. ಆದರೇ ಬಡ್ಡಿ ಹಾಗೂ ಅಸಲು ಸೇರಿದಂತೆ 16 ಲಕ್ಷ ಪಾವತಿ ಮಾಡಿ ಎಂಬುದಾಗಿ ರೈತ ಸಾತೇರಿ ಹೊನ್ನಪ್ಪಗೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ್ದಾಗಿ ಹೇಳಲಾಗುತ್ತಿದೆ.
ಇದಷ್ಟೇ ಅಲ್ಲದೇ ಒಂದು ವೇಳೆ ಸಾಲವನ್ನು ತೀರಿಸದೇ ಇದ್ದರೇ ನಿಮ್ಮ ಮನೆ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕಾಗಿ ಇಡೀ ಊರ ತುಂಬ ಡಂಗೂರ ಕೂಡ ಸಾರಿಸಿದ್ದಾರೆ. ಈ ಹಿನ್ನಲೆಯಲ್ಲಿ ಮನನೊಂದು, ಮರ್ಯಾದೆಗೆ ಅಂಜಿ ರೈತ ಸಾತೇರಿ ಹೊನ್ನಪ್ಪ ರುಟಕುಟೆ(78) ಆತ್ಮಹತ್ಯೆಗೆ ಶರಣಾಗಿದ್ದಾಗಿ ಹೇಳಲಾಗುತ್ತಿದೆ.
‘BEd ವ್ಯಾಸಂಗ’ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: ‘ದಾಖಲೆಗಳ ಪರಿಶೀಲನೆ’ಗೆ ಮತ್ತೊಂದು ಅವಕಾಶ








