ಚಿತ್ತಾಪುರ: ಇಲ್ಲಿ ನವೆಂಬರ್.12ರಂದು ಆರ್ ಎಸ್ ಎಸ್ ಪಥಸಂಚಲನ ನಡೆಸೋದಕ್ಕೆ ಹೈಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ. ಈ ಮೂಲಕ ನವೆಂಬರ್.16ರಂದು ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಅವಕಾಶ ಸಿಕ್ಕಂತೆ ಆಗಿದೆ.
ಈ ಕುರಿತಂತೆ ಕಲಬುರ್ಗಿ ಹೈಕೋರ್ಟ್ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸಿತು. ವಾದ-ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ನವೆಂಬರ್.16ರಂದು ಮಧ್ಯಾಹ್ನ 3.30ರಿಂದ 5.45ರ ಒಳಗಾಗಿ ಪಥಸಂಚಲನ ನಡೆಸಲು ಅನುಮತಿ ನೀಡಿದೆ.
ಇದಷ್ಟೇ ಅಲ್ಲದೇ ಆರ್ ಎಸ್ ಎಸ್ ಪಥಸಂಚಲನದಲ್ಲಿ ಕೇವಲ 350 ಜನರು ಮಾತ್ರವೇ ಸೇರಬಹುದು. ಇದರಲ್ಲಿ 300 ಕಾರ್ಯಕರ್ತರು, 50 ಮಂದಿ ಬ್ಯಾಂಡ್ ನವರು ಸೇರಬೇಕು. ಅದರ ಹೊರತಾಗಿ ಹೆಚ್ಚಿನವರು ಸೇರುವಂತಿಲ್ಲ ಎಂಬುದಾಗಿ ಷರತ್ತು ಬದ್ಧ ಅನುಮತಿಯನ್ನು ನೀಡಿ ಆದೇಶಿಸಿದೆ.








