ನವದೆಹಲಿ : ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸ್ಪೋಟಕ ಅಂಶ ಬಹಿರಂಗವಾಗಿದ್ದು, ಸುಮಾರು 8 ಮಂದಿ ಶಂಕಿತರು ನಾಲ್ಕು ಪ್ರಮುಖ ಸ್ಥಳಗಳಲ್ಲಿ ಸರಣಿ ಸ್ಪೋಟ ನಡೆಸಲು ಯೋಜಿಸಿದ್ದರು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.
ಸುಮಾರು ಎಂಟು ಶಂಕಿತರು ನಾಲ್ಕು ಸ್ಥಳಗಳಲ್ಲಿ ಸರಣಿ ಸ್ಫೋಟ ನಡೆಸಲು ಯೋಜಿಸಿದ್ದರು. ಅವರು ತಲಾ ಎರಡು ಗುಂಪುಗಳಾಗಿ ನಾಲ್ಕು ನಗರಗಳಿಗೆ ತೆರಳಲು ಯೋಜಿಸಿದ್ದರು. ಪ್ರತಿ ಗುಂಪು ತಮ್ಮೊಂದಿಗೆ ಬಹು ಐಇಡಿಗಳನ್ನು ಸಾಗಿಸಬೇಕಿತ್ತು ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಇನ್ನು ದೆಹಲಿ ಕೆಂಪುಕೋಟೆ ಸ್ಫೋಟದ ಪ್ರಮುಖ ಶಂಕಿತ ಡಾ.ಉಮರ್ ಉನ್ ನಬಿ ಸೋಮವಾರ ಸಂಜೆ ಸ್ಫೋಟಗೊಂಡು ಕನಿಷ್ಠ 12 ಜನರು ಸಾವನ್ನಪ್ಪಿ ಮತ್ತು ಹಲವರು ಗಾಯಗೊಂಡ ಐ20 ಕಾರಿನ ‘ಬಾಂಬರ್’ ಎಂದು ಡಿಎನ್ಎ ಪರೀಕ್ಷೆಯ ಮೂಲಕ ದೃಢಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಮರ್ ನಬಿ ತಾಯಿಯ ರಕ್ತದಿಂದ ಸಂಗ್ರಹಿಸಿದ ಡಿಎನ್ಎ ಮಾದರಿಗಳು ಅಪರಾಧ ಸ್ಥಳದಲ್ಲಿ ಪತ್ತೆಯಾದ ದೇಹದ ಭಾಗಗಳೊಂದಿಗೆ ಹೊಂದಿಕೆಯಾದ ನಂತರ ಉಮರ್ ನಬಿ ಬಾಂಬರ್ ಎಂದು ದೃಢಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Delhi terror blast case | Around eight suspects planned to carry out a serial blast at four locations. They had planned to move to four cities in groups of two each. Each group was supposed to carry multiple IEDs along with them: Investigative Agency Sources
— ANI (@ANI) November 13, 2025








