ಬೆಂಗಳೂರು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿ ಉಪವಿಭಾಗ ಅರೇಹಳ್ಳಿ ಗ್ರಾಮ, ಉತ್ತರಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸರ್ವೇ ಸಂಖ್ಯೆ 2 , 6/2 ಹಾಗೂ 4 ರಲ್ಲಿ 2 ಮತ್ತು 3ನೇ ಮುಖ್ಯರಸ್ತೆಯಲ್ಲಿ ಒಟ್ಟಾರೆ 6,000 ಚದರ ಅಡಿ ಜಾಗದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿದ್ದು, ರಸ್ತೆ ಒತ್ತುವರಿ ಮಾಡಲಾಗಿರುತ್ತದೆಯೆಂದು ಸಾರ್ವಜನಿಕರು ಮಾನ್ಯ ಕರ್ನಾಟಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.
ಈ ದೂರಿನನ್ವಯ ಮಾನ್ಯ ಲೋಕಾಯುಕ್ತರವರು ಒತ್ತುವರಿ ತೆರವುಗೊಳಿಸಲು ನೀಡಿರುವ ಸೂಚನೆ ಮೇರೆಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವತಿಯಿಂದ ಇಂದು ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿರುತ್ತದೆ.
ಈ ಕಾರ್ಯಾಚರಣೆಯಿಂದ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಅನಧಿಕೃತ ಶೆಡ್ ತೆರವುಗೊಳಿಸಿ ಸಾರ್ವಜನಿಕರಿಗೆ ರಸ್ತೆ ಉಪಯೋಗಿಸಲು ಅನುಕೂಲ ಮಾಡಿಕೊಡಲಾಗಿದ್ದು , 6,000 ಚದರ ಅಡಿ ಇರುವ ಸುಮಾರು ರೂ.10. 00 ಕೋಟಿ ಮೌಲ್ಯದ ಜಾಗವನ್ನು ಪಾಲಿಕೆ ವತಿಯಿಂದ ವಶಪಡಿಸಿಕೊಳ್ಳಲಾಗಿರುತ್ತದೆ.
ರಸ್ತೆ ಒತ್ತುವರಿದಾರರ ವಿರುಧ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಾಚರಣೆ ವೇಳೆ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.
ಸಾಗರ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಕಲ್ಮನೆಯಲ್ಲಿ ನಡೆಸಿದ ‘ಜನಸಂಪರ್ಕ ಸಭೆ’ಗೆ ಭರ್ಜರಿ ರೆಸ್ಪಾನ್ಸ್!






