ಶಿವಮೊಗ್ಗ: ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಡೆಸಿದರು. ಈ ಜನಸಂಪರ್ಕ ಸಭೆಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಬರೋಬ್ಬರಿ 66ಕ್ಕೂ ಹೆಚ್ಚು ಜನರು ತಮ್ಮ ಸಮಸ್ಯೆ ಪರಿಹರಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳಿಗೆ ಸ್ಥಳದಲ್ಲೇ ಅಧಿಕಾರಿಗಳ ಮೂಲಕ ಸಮಸ್ಯೆ ಪರಿಹರಿಸುವಂತ ಕೆಲಸ ಮಾಡಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಜನಸಂಪರ್ಕ ಸಭೆಯನ್ನು ನಡೆಸಿದರು. ಈ ಕಾರ್ಯಕ್ರಮ ಉದ್ಘಾಟಿಸಿ, ಜನಸಂಪರ್ಕ ಸಭೆಯನ್ನು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನೊಂದ ಜನರಿಗೆ ಸ್ಪಂದಿಸಬೇಕು. ಅವರ ಅಹವಾಲುಗಳನ್ನು ಪರಿಹರಿಸಬೇಕು ಎನ್ನುವ ಕಾರಣದಿಂದ ಜನಸಂಪರ್ಕ ಸಭೆ ನಡೆಸಲಾಗಿದೆ. ಇಲ್ಲಿ ಬಂದಿರುವಂತ ಅರ್ಜಿಗಳಲ್ಲಿ ಬಹುತೇಕವು 94ಸಿ ಗೆ ಸಂಬಂಧಿಸಿದ್ದವು. ಸರ್ಕಾರದಿಂದ ಕಾನು, ಕಂದಾಯ ಭೂಮಿ ಪರಿಹಾರಕ್ಕಾಗಿ ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೆಗೆ ಸೂಚಿಸಲಾಗಿದೆ. ಆ ಸರ್ವೆ ಬಳಿಕ ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.
ಬಡ ಜನರ ಸಮಸ್ಯೆ ಇತ್ಯರ್ಥಕ್ಕೆ ಕಲ್ಮನೆಯಲ್ಲಿ ಜನಸಂಪರ್ಕ ಸಭೆ
ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲೇ ಇಂದು ಜನಸಂಪರ್ಕ ಸಭೆ ನಡೆಸಿದಂತ ಮುಖ್ಯ ಕಾರಣ ಇಲ್ಲಿ ಕೂಲಿ ಕಾರ್ಮಿಕರು, ರೈತಾಪಿ ವರ್ಗದವರೇ ಹೆಚ್ಚು ಇದ್ದಾರೆ. ಅವರ ಸಮಸ್ಯೆ ಸರಿ ಪಡಿಸೋ ನಿಟ್ಟಿನಲ್ಲಿ ಜನಸಂಪರ್ಕ ಸಭೆಯಲ್ಲಿ ಇಲ್ಲಿ ನಡೆಸಲಾಗಿದೆ. ಸಾಗರ ತಾಲ್ಲೂಕು ಆಳಿತಕ್ಕೆ 1235 ಅರ್ಜಿಗಳು ಪೌತಿ ಖಾತೆಗಾಗಿ ಸಲ್ಲಿಸಲಾಗಿತ್ತು. ಆ ಎಲ್ಲಾ ಅರ್ಜಿಗಳನ್ನು ತಾಲ್ಲೂಕು ಆಡಳಿತದಿಂದ ವಿಲೇವಾರಿ ಮಾಡಿದೆ. ಈ ಮೊದಲು ನಾನು ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿದ್ದೆನು. ಇದೀಗ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಡೆಸುತ್ತಿದ್ದೇನೆ. ಇನ್ಮುಂದೆ ಜನರ ಬಳಿಗೆ ಸರ್ಕಾರ ಕೊಂಡೊಯ್ಯುವ ನಿಟ್ಟಿನಲ್ಲಿ ಜನಸಂಪರ್ಕ ಸಭೆ ಮುಂದುವರೆಯಲಿದೆ. ಆ ಮೂಲಕ ಜನರ ಸಮಸ್ಯೆ ಬಗೆ ಹರಿಸೋ ಕೆಲಸವನ್ನು ಶಾಸಕನಾಗಿ ಮಾಡಲಿದ್ದೇನೆ ಎಂಬುದಾಗಿ ತಿಳಿಸಿದರು.
ಅರ್ಜಿ ಇತ್ಯರ್ಥಕ್ಕೆ ಒಂದು ವಾರ ಡೆಡ್ ಲೈನ್ ಕೊಟ್ಟ ಶಾಸಕರು
ಇಂದಿನ ಜನಸಂಪರ್ಕ ಸಭೆಯಲ್ಲಿ 66ಕ್ಕೂ ಹೆಚ್ಚು ಅರ್ಜಿಗಳು ಸಮಸ್ಯೆ ಹೇಳಿಕೊಂಡು ಜನರು ಸಲ್ಲಿಸಿದ್ದಾರೆ. ಅವುಗಳನ್ನು ಸ್ಥಳದಲ್ಲೇ ಪರಿಹರಿಸುವಂತ ಕೆಲಸ ಮಾಡಲಾಗುತ್ತಿದೆ. ನಾನು ಇಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸುತ್ತೇನೆ. ಒಂದು ವಾರದಲ್ಲಿ ಜನರು ಸಮಸ್ಯೆ ಹೇಳಿಕೊಂಡು ಸಲ್ಲಿಸಿರುವಂತ ಅರ್ಜಿಗಳನ್ನು ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದೇನೆ ಎಂದರು.
ಜನರನ್ನು ಅರ್ಜಿ ಹಿಡಿದು ಅಲೆದಾಡಿಸಿದ್ರೆ ಸಸ್ಪೆಂಡ್
ಜನರು ಸಮಸ್ಯೆ ಹೇಳಿಕೊಂಡು ತಾಲ್ಲೂಕು ಆಡಳಿತಕ್ಕೆ ಬರುತ್ತಾರೆ. ಅವರ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವಂತ ಕೆಲಸವನ್ನು ತಾಲ್ಲೂಕು ಆಡಳಿತ ಮಾಡಬೇಕು. ಕೂಲಿ ಕೆಲಸ ಮಾಡಿಕೊಂಡು, ರೈತಾಪಿ ವರ್ಗದವರೇ ಹೆಚ್ಚಿದ್ದಾರೆ. ಅವರು ಒಂದು ದಿನ ತಮ್ಮ ಕೆಲಸವನ್ನು ಬಿಟ್ಟು ಅರ್ಜಿ ಹಿಡಿದುಕೊಂಡು ಅಲೆದಾಡಿದರೇ ಅಂದಿನ ಕೂಲಿಯೇ ಹೋಗುತ್ತದೆ. ಯಾರು ಅವರನ್ನು ಅಲೆದಾಡಿಸಬಾರದು. ಅವರ ಸಮಸ್ಯೆ ಪರಿಹರಿಸುವಂತ ಕೆಲಸ ಮಾಡಬೇಕು. ಒಂದು ವೇಳೆ ಅಲೆದಾಡಿಸಿದ್ದು ಗೊತ್ತಾದ್ರೆ ಅಂತಹ ಅಧಿಕಾರಿಯನ್ನು ಮುಲಾಜಿಲ್ಲದೇ ಸಸ್ಪೆಂಡ್ ಮಾಡುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದರು.
ಕಲ್ಮನೆ ಪಿಡಿಓ ಸೌಮ್ಯಗೆ ಪುಲ್ ಕ್ಲಾಸ್
ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಲಕ್ಕನೆ ಎನ್ನುವಲ್ಲಿ ಮನೆ ಕುಸಿತಗೊಂಡು ಬಿದ್ದ ಪರಿಣಾಮ ಶೈಲಜಾ ಎಂಬುವರ ಕೈ ಕಾಲು ಮುರಿತಗೊಂಡಿತ್ತು. ಇಂತಹ ಗಂಭೀರ ವಿಷಯವನ್ನು ಶಾಸಕರು, ತಾಲ್ಲೂಕು ಆಡಳಿತಕ್ಕೆ ಕಲ್ಮನೆ ಗ್ರಾಮ ಪಂಚಾಯ್ತಿ ಪಿಡಿಓ ಸೌಮ್ಯ ತಂದಿರಲಿಲ್ಲ. ಇಂದಿನ ಜನಸಂಪರ್ಕ ಸಭೆಯಲ್ಲಿ ಶೈಲಜಾ ಪತಿಯವರು ಪರಿಹಾರ ಕೋರಿ ಅರ್ಜಿಯನ್ನು ಪೋಟೋ ಸಹಿತ ಸಲ್ಲಿಸಿದ್ದರು.
ಈ ವಿಷಯ ತಿಳಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಕೆಂಡಾಮಂಡಲವಾದರು. ಮನೆ ಬಿದ್ದ ಮಾಹಿತಿಯನ್ನು ಶಾಸಕರ ಕಚೇರಿಗೆ ನೀಡುವಂತೆ ಎಲ್ಲರಿಗೂ ತಿಳುಹಿಸಲಾಗಿತ್ತು. ಇಷ್ಟು ಗಂಭೀರವಾದಂತ ವಿಷಯವನ್ನು ನನ್ನ ಗಮನಕ್ಕೆ ಏಕೆ ತರಲಿಲ್ಲ? ಕನಿಷ್ಠ ಪಕ್ಷ ಪರಿಹಾರವನ್ನು ಕೊಟ್ಟಿದ್ದೀರಾ? ಅದು ಇಲ್ವಲ್ಲ. ನನಗೆ ತಿಳುಹಿಸಿದ್ದರೇ ಅವರಿಗೆ ಆರ್ಥಿಕ ಸಹಾಯ ಮಾಡುತ್ತಿದ್ದೆ ಎಂಬುದಾಗಿ ಕಲ್ಮನೆ ಗ್ರಾಮ ಪಂಚಾಯ್ತಿ ಪಿಡಿಓ ತರಾಟೆಗೆ ತೆಗೆದುಕೊಂಡರು.
ಸಾಗರ ತಾಲ್ಲೂಕಿನಲ್ಲಿ ಹೀಗೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ನಾನು ಸಹಿಸುವುದಿಲ್ಲ. ಅದರಲ್ಲೂ ಮಳೆಯಿಂದ ಮನೆಹಾನಿಗೊಂಡು ಬಗ್ಗೆಯಂತೂ ತಪ್ಪದೇ ಎಲ್ಲರು ನನ್ನ ಗಮನಕ್ಕೆ ತರಬೇಕು. ಈ ಹಿಂದೆಯೇ ತಹಶೀಲ್ದಾರ್ ಅವರಿಗೆ ತಿಳಿಸಲಾಗಿತ್ತು. ಈಗ ಹೊಸದಾಗಿ ಬಂದಿರುವಂತ ತಹಶೀಲ್ದಾರ್ ರಶ್ಮಿ ಅವರೇ ನಿಮ್ಮ ಗಮನಕ್ಕೂ ತರುತ್ತಿದ್ದೇನೆ ಎಂಬುದಾಗಿ ತಿಳಿಸಿದರು.

ಇಂದಿನ ಶಾಸಕರ ಜನಸಂಪರ್ಕ ಸಭೆಯಲ್ಲಿ ಸಮಸ್ಯೆ ಹೇಳಿಕೊಂಡು ಸಲ್ಲಿದ ಅರ್ಜಿ, ವಿಲೇವಾರಿ ಹೇಗಿತ್ತು ಗೊತ್ತಾ?
ಮೈಲಮ್ಮ ಎಂಬುವರು ಪರಿಷ್ಕೃತ ಹಕ್ಕುಪತ್ರಕ್ಕೆ ಮನವಿ ಮಾಡಿದ್ದರು, ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳದಲ್ಲಿದ್ದಂತ ತಹಶೀಲ್ದಾರ್ ಗೆ ಪರಿಹರಿಸುವಂತೆ ಸೂಚಿಸಿದಾಗ, ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇಕ್ಕೇರಿಯ ಶಾಂತಾರಾಂ ಎಂಬುವರು ಮನೆ ಕಟ್ಟಲಾಗಿದೆ. ಜಾಗ ಮಂಜೂರಾತಿಗೆ ಕೋರಿದ್ದರು. ಆಗ ಶಾಸಕರು ಕಾನು, ಸೊಪ್ಪಿನ ಬೆಟ್ಟದಲ್ಲಿ ಕಟ್ಟಿದ್ದರೆ ಜಾಗ ಮಂಜೂರಾತಿ ಸಾಧ್ಯವಿಲ್ಲ. ಇದು ಕೋರ್ಟ್ ನಿರ್ದೇಶನ ಕೂಡ ಆಗಿದೆ. ಬದಲಾಗಿ ಕಂದಾಯ ಭೂಮಿಯಲ್ಲಿ ನಿರ್ಮಿಸಿದ್ದರೇ ಮಂಜೂರು ಮಾಡಿಕೊಡಲಾಗುತ್ತದೆ ಎಂದರು.
ಅಕ್ಷರ ಎಂಬುವರು ಪೋಡಿ ದುರಸ್ಥಿ ಮಾಡಿ ಕೊಡಿ ಎಂಬುದಾಗಿ ಅರ್ಜಿ ಸಲ್ಲಿಸಿದ್ದನ್ನು ಪರಿಶೀಲಿಸಿದ್ದರು. 2019ರಲ್ಲಿ ಅರ್ಜಿ ಶುಲ್ಕ ಪಾವತಿಸಲಾಗಿದೆ. ಇಲ್ಲಿಯವರೆಗೆ ಸಮಸ್ಯೆ ಸರಿ ಮಾಡಿಕೊಟ್ಟಿಲ್ಲ ಎಂಬುದಾಗಿ ಶಾಸಕರ ಮುಂದೆ ಅಳಲು ತೋಡಿಕೊಂಡಾಗ, ಮತ್ತೆ ಆಫೀಸಿಗೆ ಅಲೆದಾಡಿಸುವಂತಿಲ್ಲ. ಇಂದೇ ಸಮಸ್ಯೆ ಸರಿ ಮಾಡಬೇಕು ಎಂಬುದಾಗಿ ಸೂಚಿಸದರು.
ಗಣಪತಿ ಎಂಬುವರು ತಮಗೆ ಜಾಗವಿಲ್ಲ. ಮನೆ ಕಟ್ಟಿಕೊಳ್ಳಲು ಜಾಗ ಕೊಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಆಗ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕಲ್ಮನೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಿಗೆ ಅರ್ಜಿ ಕೊಡಿ. ಅವರು ಖಾಲಿ ಇರುವಂತ ಸರ್ಕಾರಿ ಜಾಗ ನೋಡಿ ನಿಮಗೊಂದು ನಿವೇಶನ ಕೊಡಿಸಲಿದ್ದಾರೆ. ಜೊತೆಗೆ ಪಿಡಿಓ ಸೌಮ್ಯ ಅವರಿಗೆ ಇವರಿಗೊಂದು ನಿವೇಶನ ನೀಡುವ ಬಗ್ಗೆ ಕ್ರಮವಹಿಸುವಂತೆ ತಿಳಿಸಿದರು.
ಪೂರ್ಣಿಮಾ ಎಂಬುವರು ಎಸ್ಸಿ ಜಾತಿ ಪ್ರಮಾಣ ಪತ್ರ ರದ್ದಾಗಿದೆ. ಅರ್ಜಿ ಕೊಟ್ಟಿದ್ದರೂ ಸರಿಯಾಗಿ ಸಮಸ್ಯೆ ಪರಿಹರಿಸುತ್ತಿಲ್ಲ ಎಂಬುದಾಗಿ ಅಳಲು ತೋಡಿಕೊಂಡರು. ತಹಶೀಲ್ದಾರ್ ಅವರಿಗೆ ಸಮಸ್ಯೆ ಇತ್ಯರ್ಥ ಪಡಿಸಲು ಶಾಸಕರು ತಿಳಿಸಿದಾಗ, ತಹಶೀಲ್ದಾರ್ ರಶ್ಮೀ ಅವರು ಸ್ಥಳದಲ್ಲಿದ್ದಂತ ವಿಎಗೆ ಇವರಿಂದ ಅರ್ಜಿ ಹಾಕಿಸಿಕೊಂಡು, ನೀವೇ ಫಾಲೋ ಮಾಡಿ ಜಾತಿ ಪ್ರಮಾಣ ಪತ್ರ ಕೊಡಿಸುವಂತೆ ಸೂಚಿಸಿದರು.
ಸಾಗರ ತಾಲ್ಲೂಕಿನಲ್ಲಿ 250 ಕಾಲು ಸಂಕ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರು
ವ್ಯಕ್ತಿಯೊಬ್ಬರು ಕಾಲು ಸಂಕ ನಿರ್ಮಾಣಕ್ಕೆ ಮನವಿ ಮಾಡಿದಾಗ, ಸಾಗರ ತಾಲ್ಲೂಕಿನಲ್ಲಿ 250 ಕಾಲು ಸಂಕ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರಾಗಿದೆ. ಇನ್ನೂ 30 ಕಾಲು ಸಂಕ ನಿರ್ಮಾಣದಷ್ಟು ಅನುದಾನವಿದೆ. ಅತೀ ಶೀಘ್ರವೇ ಕಾಲು ಸಂಘ ನಿರ್ಮಾಣ ಮಾಡಿಸಿಕೊಡುವುದಾಗಿ ಸ್ಥಳದಲ್ಲೇ ಭರವಸೆ ನೀಡಿದರು. ಜೊತೆಗೆ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ, ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿ ಕಾಲು ಸಂಕ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.
ಶಾಸಕರ ಜನಸಂಪರ್ಕ ಸಭೆಯಲ್ಲಿ 69ಕ್ಕೂ ಅರ್ಜಿ ಸಲ್ಲಿಕೆ
ಇಂದು ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ನಡೆಸಿದಂತ ಜನಸಂಪರ್ಕ ಸಭೆಯಲ್ಲಿ ಜನರು ಸಮಸ್ಯೆ ಹೇಳಿಕೊಂಡು ಬರೋಬ್ಬರಿ 69ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದರು. 33ಕ್ಕೂ ಹೆಚ್ಚು ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿದ್ದವು ಆಗಿದ್ದರೇ, 36ಕ್ಕೂ ಹೆಚ್ಚು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ್ದವು ಆಗಿದ್ದವು. ಇವುಗಳನ್ನು ಸ್ಥಳದಲ್ಲಿದ್ದಂತ ಸಾಗರ ತಾಲ್ಲೂಕು ಆಡಳಿತದೊಂದಿಗೆ ಶಾಸಕರು ಸ್ಥಳದಲ್ಲೇ ಇತ್ಯರ್ಥ ಪಡಿಸಿ, ಸಮಸ್ಯೆ ಬಗೆ ಹರಿಸುವ ಕೆಲಸವನ್ನು ಮಾಡಿದ್ರೇ, ಮತ್ತೆ ಕೆಲವನ್ನು ಒಂದು ವಾರದೊಳಗಾಗಿ ಪರಿಹಾರಕ್ಕೂ ಸೂಚಿಸಿದರು.
ಈ ಜನಸಂಪರ್ಕ ಸಭೆಯಲ್ಲಿ ಸಾಗರ ಉಪ ವಿಭಾಗಾಧಿಕಾರಿ ವೀರೇಶ್ ಕುಮಾರ್, ಡಿಎಫ್ಓ ಮೋಹನ್ ಕುಮಾರ್, ಇಓ ಶಿವಕುಮಾರ್, ಕಲ್ಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಮರನಾಥ್, ಉಪಾಧ್ಯಕ್ಷೆ ನಿರ್ಮಲಮ್ಮ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿಆರ್ ಜಯಂತ್, ಸಾಗರ ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಕಲ್ಮನೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ, ಸದಸ್ಯ ಮಹಾಬಲೇಶ್ವರ(ಮಾಪು), ಸಾಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ನಾಗರಾಜ್ ಕಲ್ಮನೆ, ಮೈಕಲ್ ಡಿಸೋಜಾ, ಕಲಸೆ ಚಂದ್ರಪ್ಪ, ಗುರುಕೃಪಾ ಶಣೈ, ಆರ್ ಎಫ್ ಓ ಅಣ್ಣಪ್ಪ, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ ರಮೇಶ್, ಪಿಎ ಶ್ರೀನಿವಾಸ್ ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಾಸಕರ ಜನಸಂಪರ್ಕ ಸಭೆಯಲ್ಲಿ ಕಲ್ಮನೆ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರೇ, ಸಾಗರ ತಾಲ್ಲೂಕು ಶಿಕ್ಷಣ ಸಂಯೋಜಕ ವಿ.ಟಿ ಸ್ವಾಮಿ ಗಣ್ಯರನ್ನು ಸ್ವಾಗತಿಸಿದರು. ಎಸಿ ವೀರೇಶ್ ಕುಮಾರ್ ಶಾಸಕರ ಜನಸಂಪರ್ಕ ಸಭೆಯ ಕುರಿತಂತೆ ಪ್ರಸ್ತಾವಿಕವಾಗಿ ಮಾತನಾಡಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ದೆಹಲಿ ಕಾರು ಸ್ಪೋಟ ಮಿಸ್ ಆಗಿ ಆಗಿರೋದು, ನಿಜವಾದ ಟಾರ್ಗೆಟ್ ಅಯೋಧ್ಯ ರಾಮ ಮಂದಿರ, ಕಾಶಿ ವಿಶ್ವನಾಥ: ಮೂಲಗಳು








