ಬೆಂಗಳೂರು : ರಾಜ್ಯದಲ್ಲಿನ ಸುಮಾರು 1270 ರಾಜ್ಯ ಆಂಬುಲೆನ್ಸ್ಗಳನ್ನು ನಿಗಾವಹಿಸುವ ಹಾಗೂ ತುರ್ತು ಪ್ರಕರಣಗಳನ್ನು ಸಾಗಿಸಲು ಹಾಗೂ ಆಸ್ಪತ್ರೆಯಿಂದ ಮೇಲ್ದರ್ಜೆ ಆಸ್ಪತ್ರೆಗೆ ರೋಗಿಗಳನ್ನು ರವಾನಿಸಲು NG-ERSS 112 ತಂತ್ರಾಂಶವನ್ನು ಅಳವಡಿಸುವ ಬಗ್ಗೆ.
ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಆದೇಶದಲ್ಲಿ 2025-26 ನೇ ಸಾಲಿಗೆ ರಾಷ್ಟ್ರೀಯ ಅಪಘಾತ ಮತ್ತು ಸುಟ್ಟ ಗಾಯಗಳ ಕಾರ್ಯಕ್ರಮದಡಿ ಬಲಗೊಳಿಸಲು ಆಂಬುಲೆನ್ಸ್ ಹಾಗೂ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ರೂ. 145.00 ಕೋಟಿಗಳ ಪರಿಷ್ಕೃತ ಕ್ರಿಯಾ ಯೋಜನೆಯಾದ ನಂತರ ಹಾಗೂ ರೂ. 145.00 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ ನಂತರವೇ ಟೆಂಡರ್ಗಳನ್ನು ತೆರೆದು ಅಂತಿಮಗೊಳಿಸಿ ಖರೀದಿಸಲು ಕೆಟಿಪಿಪಿ ಕಾಯ್ದೆ ಹಾಗೂ ನಿಯಮಗಳನ್ನು ಅನುಸರಿಸಿ ಟೆಂಡರ್ ಆಹ್ವಾನಿಸಲು ಅನುಮೋದನೆ ನೀಡಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಆದೇಶದಲ್ಲಿ ರಾಷ್ಟ್ರೀಯ ಅಪಘಾತ ಮತ್ತು ಸುಟ್ಟ ಗಾಯಗಳ ಕಾರ್ಯಕ್ರಮದಡಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಸ್ಪತ್ರೆಗಳನ್ನು ಬಲಗೊಳಿಸಲು ಒಟ್ಟು 13 ಆಂಬ್ಯುಲೆನ್ಸ್ ಗಳನ್ನು ಹಾಗೂ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ರೂ. 10.00 ಕೋಟಿಗಳ(ರೂ.ಹತ್ತು ಕೋಟಿಗಳು ಮಾತ) ಅನುದಾನದಲ್ಲಿ ಕೆಟಿಪಿಪಿ ಕಾಯ್ದೆ ಹಾಗೂ ನಿಯಮಗಳನ್ನು ಅನುಸರಿಸಿ ಟೆಂಡರ್ ಆಹ್ವಾನಿಸಿ ಖರೀದಿಸಲು ಅನುಮೋದನೆ ನೀಡಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ಪತ್ರದಲ್ಲಿ ರಾಜ್ಯದಲ್ಲಿ ಸುಮಾರು 1270 ರಾಜ್ಯ ಆಂಬ್ಯುಲೆನ್ಸ್ಗಳಿದ್ದು ಈ ಎಲ್ಲಾ ಆಂಬುಲೆನ್ಸ್ಗಳನ್ನು ನಿಗಾವಹಿಸುವ ಹಾಗೂ ತುರ್ತು ಪ್ರಕರಣಗಳನ್ನು ಸಾಗಿಸಲು ಹಾಗೂ ಆಸ್ಪತ್ರೆಯಿಂದ ಮೇಲ್ಮರ್ಜೆ ಆಸ್ಪತ್ರೆಗೆ ರೋಗಿಗಳನ್ನು ರವಾನಿಸಲು NG-ERSS 112 ತಂತ್ರಾಂಶವನ್ನು ಅಳವಡಿಸಿ ಸೂಕ್ತ ನಿಗಾವಣೆ ಮಾಡಲು ತೀರ್ಮಾನಿಸಲಾಗಿರುವ ಹಿನ್ನೆಲೆಯಲ್ಲಿ ಸದರಿ ಆಂಬ್ಯುಲೆನ್ಸ್ಗಳಿಗೆ ಅವಶ್ಯಕವಿರುವ Mobile Data Terminal ಗಳಿಗೆ ಪ್ರತಿ ಉಪಕರಣಕ್ಕೆ ಅಂದಾಜು ರೂ. 35,000/- ಗಳಂತೆ ಒಟ್ಟು ರೂ. 4,44,50,000/- ಗಳು ಅವಶ್ಯಕವಿರುತ್ತದೆ. ಸದರಿ ಅನುದಾನವನ್ನು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನಿಧಿಯಡಿಯ ಲೆಕ್ಕ ಶೀರ್ಷಿಕೆ 4210-01-200-0-04 ರಡಿಯಲ್ಲಿ ಒದಗಿಸಲು ಆಯುಕ್ತರು ಆಕುಕ ಸೇವೆಗಳು ಇವರು ಕೋರಿರುತ್ತಾರೆ
ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿ: 19.03.2025 ರಂದು ನಡೆದ ಸಭೆಯಲ್ಲಿ 2025-26 ನೇ ಸಾಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರೂ. 45.00 ಕೋಟಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿರುವುದರಿಂದ ಹಾಗೂ 2025-26ನೇ ಸಾಲಿನ ಆಯವ್ಯಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸುರಕ್ತತಾ ನಿಧಿಯಡಿಯಲ್ಲಿ ಲೆಕ್ಕ ಶೀರ್ಷಿಕೆ: 4210-01-200-0-04 ರಡಿಯಲ್ಲಿ ರೂ. 45.00 ಕೋಟಿಗಳ ಅನುದಾನವು ನಿಗದಿಯಾಗಿರುವುದರಿಂದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 442 ಸಿಜಿಇ 2025
ಬೆಂಗಳೂರು, ದಿನಾಂಕ: 06.11.2025
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಸುಮಾರು 1270 ರಾಜ್ಯ ಆಂಬುಲೆನ್ಸ್ಗಳನ್ನು ನಿಗಾವಹಿಸುವ ಹಾಗೂ ತುರ್ತು ಪ್ರಕರಣಗಳನ್ನು ಸಾಗಿಸಲು ಹಾಗೂ ಆಸ್ಪತ್ರೆಯಿಂದ ಮೇಲ್ದರ್ಜೆ ಆಸ್ಪತ್ರೆಗೆ ರೋಗಿಗಳನ್ನು ರವಾನಿಸಲು NG-ERSS 112 ತಂತ್ರಾಂಶವನ್ನು ಅಳವಡಿಸಿ ಸೂಕ್ತ ನಿಗಾವಣೆ ಮಾಡಲು ಅವಶ್ಯಕವಿರುವ Mobile Data Terminal ಗಳನ್ನು ಪ್ರತಿ ಉಪಕರಣಕ್ಕೆ ಅಂದಾಜು ರೂ. 35,000/- ಗಳಂತೆ ಒಟ್ಟು ರೂ. 4,44,50,000/- ಗಳ ಅನುದಾನವನ್ನು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನಿಧಿಯ 2025-26ನೇ ಸಾಲಿನ ಲೆಕ್ಕ ಶೀರ್ಷಿಕೆ 4210-01-200-0-04 ರಡಿಯಲ್ಲಿನ ಅನುದಾನದಿಂದ ಭರಿಸಲು ಆದೇಶಿಸಲಾಗಿದೆ.









