ಬೆಂಗಳೂರು: ಪ್ರಸಕ್ತ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ 4,007 ಸೀಟು ಹಂಚಿಕೆಗೆ ಲಭ್ಯ ಇದ್ದು, ಅವುಗಳ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆ ಕೊಟ್ಟಿರುವ ಪಟ್ಟಿಯಲ್ಲಿ ಕ್ಲಿನಿಕಲ್, ಪ್ರೀ ಕ್ಲಿನಿಕಲ್ ಮತ್ತು ಪ್ಯಾರಾ ಕ್ಲಿನಿಕಲ್ ಗೆ ಸೇರಿದ ಸೀಟುಗಳು ಸೇರಿವೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯಾವ ಕಾಲೇಜಿನಲ್ಲಿ? ಯಾವ ವಿಭಾಗದ ಸೀಟುಗಳು ಎಷ್ಟು ಸಂಖ್ಯೆಯಲ್ಲಿ ಇವೆ ಎಂಬುದನ್ನು ಅಭ್ಯರ್ಥಿಗಳು ನೋಡಿಕೊಂಡು, ಎಚ್ಚರಿಕೆಯಿಂದ ಆಪ್ಷನ್ ಎಂಟ್ರಿ ಮಾಡಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
ಆಪ್ಷನ್ ಎಂಟ್ರಿ ಆರಂಭ ಮತ್ತು ಸೀಟು ಹಂಚಿಕೆ ಬಗ್ಗೆ ಸದ್ಯದಲ್ಲೇ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿಯಿ೦ದ ಬೆಳೆ ಕಳೆದುಕೊ೦ಡ `ರೈತರ’ ಖಾತೆಗೆ ಹಣ ವರ್ಗಾವಣೆ : CM ಸಿದ್ದರಾಮಯ್ಯ ಘೋಷಣೆ








