ನವದೆಹಲಿ: ದೆಹಲಿಯ ಕೆಂಪುಕೋಟೆ ಸಮೀಪದ ಮೆಟ್ರೋ ರೈಲು ಗೇಟ್ ಬಳಿಯಲ್ಲಿ ಕಾರು ಸ್ಪೋಟಗೊಂಡು 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಘಟನೆ ನಿನ್ನೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವಂತ ಕೇಂದ್ರ ಸರ್ಕಾರವು ರಾಷ್ಟ್ರೀ ತನಿಖಾ ದಳದಿಂದ (NIA) ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.
Ministry of Home Affairs hands over Delhi car blast case to the National Investigation Agency (NIA) pic.twitter.com/2U0p03Aawx
— ANI (@ANI) November 11, 2025
ನಿನ್ನೆ ದೆಹಲಿಯ ಕೆಂಪುಕೋಟೆ ಬಳಿಯಲ್ಲಿನ ಮೆಟ್ರೋ ನಿಲ್ದಾಣದ ಗೇಟ್ ಬಳಿಯಲ್ಲೇ ಎರಡು ಕಾರುಗಳು ಸ್ಪೋಟಗೊಂಡಿದ್ದವು. ಈ ಸ್ಪೋಟದಿಂದಾಗಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅಲ್ಲದೇ ಹಲವರು ಗಾಯಗೊಂಡಿದ್ದರು.
ಈ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಮಾಹಿತಿ ಪಡೆದಿದ್ದರು. ಅಲ್ಲದೇ ಮೃತರ ಆತ್ಮಕ್ಕೂ ಶಾಂತಿಯನ್ನು ಕೋರಿದ್ದರು. ಈ ಘಟನೆಯ ಕಾರಣ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು.
ಇದೀಗ ಕೇಂದ್ರ ಸರ್ಕಾರವು, ದೆಹಲಿಯ ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿಯಲ್ಲಿ ನಡೆದಿದ್ದಂತ ಕಾರು ಸ್ಪೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಲು ಆದೇಶಿಸಿದೆ.
BIG NEWS: ‘ರಾಜ್ಯ ಸರ್ಕಾರ’ದ ಆದೇಶಕ್ಕೂ ಡೋಂಟ್ ಕೇರ್: ‘ಸಚಿವರ ಸಭೆ’ಯಲ್ಲೇ ‘ಪ್ಲಾಸ್ಟಿಕ್ ನೀರಿನ ಬಾಟಲ್’ ಬಳಕೆ
ರಾಜ್ಯದಲ್ಲಿ ಅತಿವೃಷ್ಟಿಯಿ೦ದ ಬೆಳೆ ಕಳೆದುಕೊ೦ಡ `ರೈತರ’ ಖಾತೆಗೆ ಹಣ ವರ್ಗಾವಣೆ : CM ಸಿದ್ದರಾಮಯ್ಯ ಘೋಷಣೆ








