ಬೆಂಗಳೂರು: ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಲಾಗಿದೆ. ಅದೇ ರಾಜ್ಯ ಸರ್ಕಾರವು ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತವನ್ನು ಸಹಕಾರ ಇಲಾಖೆಯಲ್ಲಿ ನೋಂದಾಯಿಸಿ, ಸಹಕಾರ ಸಂಘಗಳ ಅಪರ ನಿಬಂಧಕರಿಂದ ನೋಂದಣಿ ಪ್ರಮಾಣಪತ್ರವನ್ನು ಪಡೆಯಲಾಗಿದೆ.
ಈ ಕುರಿತಂತೆ ಸಹಕಾರ ಸಂಘಗಳ ಅಪರ ನಿಬಂಧಕರು ಆದೇಶ ಮಾಡಿದ್ದು, ಉದ್ದೇಶಿತ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿ, ನಂ.18, 2ನೇ ಮಹಡಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಕಛೇರಿ ಆವರಣ, ಕೃಷಿ ಭವನ, ನೃಪತುಂಗ ರಸ್ತೆ, ಬೆಂಗಳೂರು-01 ಈ ಸಹಕಾರ ಸಂಘದ ಈ ಸಂಘವನ್ನು ನೋಂದಣಿ ಮಾಡುವ ಸಲುವಾಗಿ ಉದ್ದೇಶಿತ ಸಹಕಾರ ಸಂಘದ ಮುಖ್ಯ ಪ್ರವರ್ತಕರು, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರವರ ಮುಖಾಂತರ ಉಲ್ಲೇಖ (1) ರಲ್ಲಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಉಲ್ಲೇಖ (2)ರಲ್ಲಿ ಸಹಕಾರ ಸಂಘಗಳ ಸಹಕಾರ ಅಭಿವೃದ್ಧಿ ಅಧಿಕಾರಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, 1ನೇ ವಲಯ, ಬೆಂಗಳೂರು ನಗರ ಜಿಲ್ಲೆ ರವರಿಗೆ ಕಳುಹಿಸಿ ಸಾಧ್ಯತಾ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು, ಸದರಿಯವರು ಉಲ್ಲೇಖ (3) ರನ್ವಯ ನೀಡಿದ ಸಾಧ್ಯತಾ ವರದಿಯನ್ನು ಪರಿಗಣಿಸಿ ಉಲ್ಲೇಖ(4) ರ ಈ ಕಛೇರಿಯ ಸಂಘದ ನೋಂದಣಿ ಪೂರ್ವ ಷೇರು ಸಂಗ್ರಹ ಅನುಮತಿ ಪತ್ರದಲ್ಲಿ “ಪ್ರಾರಂಭಿಕ ಷೇರು ಹಣ ಸಂಗ್ರಹಣೆ” ಗಾಗಿ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಬರುವ 1000 ಕ್ಕಿಂತ ಕಡಿಮೆ ಇಲ್ಲದ ಅರ್ಹಜನರಿಂದ ಕನಿಷ್ಟ ರೂ.20.00 ಲಕ್ಷಗಳ ಷೇರು ಹಣವನ್ನು ಸಂಗ್ರಹಿಸಲು ಷರತ್ತು ವಿಧಿಸಿ ಅನುಮತಿ ನೀಡಲಾಗಿರುತ್ತದೆ.
ಉದ್ದೇಶಿತ ಸಹಕಾರ ಸಂಘದ ಮುಖ್ಯ ಪ್ರವರ್ತಕರು, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರವರ ಮುಖಾಂತರ ಉಲ್ಲೇಖ (5)ರಲ್ಲಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಉದ್ದೇಶಿತ ಸಂಘದ ನೋಂದಣಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಸದರಿಯವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿದಾಗ ಉದ್ದೇಶಿತ ಸಹಕಾರ ಸಂಘದ ಮುಖ್ಯ ಪ್ರವರ್ತಕರು ಕಾರ್ಯವ್ಯಾಪ್ತಿಯಲ್ಲಿ ಬರುವಂತಹ ಈವರೆಗೆ 2000 ಜನರಿಂದ ಒಟ್ಟು ರೂ. 22.23 ಲಕ್ಷಗಳ ಷೇರು ಮೊತ್ತವನ್ನು ಸಂಗ್ರಹಿಸಿ ಕರ್ನಾಟಕ ರಾಜ್ಯ ಸಹಕಾರಿ ಅಫೆಕ್ಸ್ ಬ್ಯಾಂಕ್ ಲಿ, ಬೆಂಗಳೂರು ಇಲ್ಲಿ ಠೇವಣಿಕರಿಸಿರುತ್ತಾರೆ, ಈ ಸಂಬಂಧ ಬ್ಯಾಂಕಿನಿಂದ ಅಮಾನತ್ ಖಾತೆಯ ಸ್ಟೇಟ್‌ಮೆಂಟ್ ನ್ನು ಪಡೆದು ಸಲ್ಲಿಸಿರುತ್ತಾರೆ. ಉದ್ದೇಶಿತ ಸಹಕಾರ ಸಂಘದ ನೋದಣಿ ಸಂಬಂಧ ನೋಂದಣಿ ಶುಲ್ಕ ರೂ.2000/-ಗಳನ್ನು ಬ್ಯಾಂಕಿನಲ್ಲಿ ಪಾವತಿಸಿ ಚಲನ್ (ವಷ125042500027328ನ್ನು ಸಲ್ಲಿಸಿರುತ್ತಾರೆ. ಉದ್ದೇಶಿತ ಸಹಕಾರ ಸಂಘದ ಉಪವಿಧಿಯ ಉದ್ದೇಶಿತ ಸಹಕಾರ ಸಂಘವನ್ನು ನೋಂದಣಿ ಮಾಡಿಕೊಡಬೇಕಾಗಿ ಕೋರಿರುತ್ತಾರೆ.
ಸಭೆಯಲ್ಲಿ ಉದ್ದೇಶಿತ ಸಹಕಾರ ಸಂಘದ ಮುಖ್ಯ ಪ್ರವರ್ತಕರು ನಿರ್ದೇಶಕರು, ಮಹಿಳಾ ಅಭಿವೃದ್ಧಿ ಇಲಾಖೆ ರವರ ಮುಖಾಂತರ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಗಣಿಸಿ ಉದ್ದೇಶಿತ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿ, ನಂ.18, 2ನೇ ಮಹಡಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಕಛೇರಿ ಆವರಣ, ಕೃಷಿ ಭವನ, ನೃಪತುಂಗ ರಸ್ತೆ, ಬೆಂಗಳೂರು-01 ಸಹಕಾರ ಸಂಘವನ್ನು ನೋಂದಾಯಿಸುವುದು ಸೂಕ್ತವೆಂದು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 07 ರನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಒ:71:ಸಿಎಲ್ಎ ಎಂ:2016 ದಿನಾಂಕ:06-12-2016 ರಂತೆ ಪ್ರತ್ಯಾಯೋಜಿತವಾಗಿರುವ ಅಧಿಕಾರ ದನ್ವಯ ಲಕ್ಷ್ಮೀಪತಯ್ಯ, ಕೆ.ಸಿ.ಎಸ್., ಸಹಕಾರ ಸಂಘಗಳ ಅಪರ ನಿಬಂಧಕರು (ವಸತಿ ಮತ್ತು ಇತರೆ), ಸಹಕಾರ ಸಂಘಗಳ ನಿಬಂಧಕರ ಕಛೇರಿ, ಬೆಂಗಳೂರು ಆದ ನಾನು ನಿಹಿತವಾದ ಅಧಿಕಾರವನ್ನು ಚಲಾಯಿಸುತ್ತಾ ಉದ್ದೇಶಿತ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿ, ನಂ.18, 2ನೇ ಮಹಡಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಕಛೇರಿ ಆವರಣ, ಕೃಷಿ ಭವನ, ನೃಪತುಂಗ ರಸ್ತೆ, ಬೆಂಗಳೂರು-01 ಈ ಸಂಘವನ್ನು ನೋಂದಣಿ ಮಾಡಿರುತ್ತೇನೆ. ಸದರಿ ಸಹಕಾರ ಸಂಘದ ಪುಟ ಸಂಖ್ಯೆ 01 ರಿಂದ 42 ರವರೆಗಿನ ಕ್ರಮ ಸಂಖ್ಯೆ 01 ರಿಂದ 111 ರ ವರೆಗಿನ ಉಪವಿಧಿಗಳನ್ನು ಅನುಮೋದಿಸಿ ನೋಂದಾಯಿಸಿದೆ.
ಸದರಿ ಸಂಘದ ಮುಖ್ಯಪ್ರವರ್ತಕರು ಈ ಆದೇಶ ಹೊರಡಿಸಿದ ಒಂದು ತಿಂಗಳೊಳಗಾಗಿ ಸಂಘದ “ಪ್ರಥಮ ಸಾಮಾನ್ಯ ಸಭೆ” ಯನ್ನು ನಡೆಸಿ ಸದರಿ ಸಭೆಯ ನಡವಳಿಯನ್ನು ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಮತ ಕಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ; ರಾಜ್ಯದ 1,12,41,000 ಸಹಿಗಳನ್ನು ಎಐಸಿಸಿಗೆ ಹಸ್ತಾಂತರಿಸಿದ ಡಿಕೆಶಿ
BIG NEWS : `ಜಾತಿ ಗಣತಿ’ ಸಮೀಕ್ಷೆದಾರರು, ಮೇಲ್ವಿಚಾರಕರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ `ಗೌರವಧನ’ ಬಿಡುಗಡೆ








