ಬೆಂಗಳೂರು: 2025-26ನೇ ಸಾಲಿನಲ್ಲಿ ಡಿಪ್ಲೋಮಾ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶುಲ್ಕ ಪಾವತಿಸುವಂತೆ ಕಾಲೇಜುಗಳಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಸೂಚಿಸಿದೆ.
ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಅನುಮೋದಿತ ಪಟ್ಟಿ ಹಾಗೂ ವಿಶ್ವವಿದ್ಯಾಲಯದ ಶುಲ್ಕವನ್ನು ಪಾವತಿಸಿದ ರಶೀದಿಯನ್ನು ವಿಟಿಯುಗೆ ಸಲ್ಲಿಸಲು ಸೂಚಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮೂಲಕ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶುಲ್ಕವನ್ನು ಕೆಇಎ ಆಯಾ ಕಾಲೇಜುಗಳಿಗೆ ಪಾವತಿಸಿರುತ್ತದೆ. ಈ ಮೊತ್ತವನ್ನು ಕಾಲೇಜುಗಳು ವಿಟಿಯು ಖಾತೆಗೆ ಪಾವತಿಸಬೇಕೆಂದು ಕೋರಿದೆ.
ಕೆಇಎ ಮತ್ತು ಮ್ಯಾನೇಜ್‌ಮೆಂಟ್ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳ ಮೊತ್ತವನ್ನು ಪಾವತಿಸಲು ಸೂಚಿಸಿದೆ. ವಿಟಿಯು ವಿತ್ತಾಧಿಕಾರಿ ಖಾತೆಗೆ ಆಡಳಿತ ವಿಭಾಗಕ್ಕೆ ಸಂಬಂಧಿತ ಶುಲ್ಕವನ್ನು ಮಾತ್ರ ಪಾವತಿಸಲು ಸೂಚಿಸಿದ್ದು, ಪರೀಕ್ಷಾ ವಿಭಾಗದ ಶುಲ್ಕವನ್ನು ಪಾವತಿಸಲು ಪರೀಕ್ಷಾ ವಿಭಾಗವನ್ನು ಸಂಪರ್ಕಿಸಬೇಕೆಂದು ಕೋರಿದೆ.
ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿಸದೇ ಇದ್ದ ಪಕ್ಷದಲ್ಲಿ ಅಂತಹ ವಿದ್ಯಾರ್ಥಿಗಳ ಪಟ್ಟಿಯನ್ನು ಸ್ವೀಕರಿಸಲಾಗುವುದಿಲ್ಲವೆಂದು ವಿಟಿಯು ಸ್ಪಷ್ಟಪಡಿಸಿದೆ. ಹೆಚ್ಚಿನ ಮಾಹಿತಿಗೆ ವಿಟಿಯು ವೆಬ್‌ಸೈಟ್ https://vtu.ac.in/ ನೋಡಬಹುದು.
ವಾಸ್ತುಶಿಲ್ಪ ತರಗತಿಗಳು ಜ.1ರಿಂದ ಆರಂಭ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) 6 ಮತ್ತು 8ನೇ ಸೆಮಿಸ್ಟರ್ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್ ಪ್ರೋಗ್ರಾಂಗಳ ತರಗತಿಗಳನ್ನು 2026 ಜನವರಿ 1ರಿಂದ ಆರಂಭಿಸುವಂತೆ ಕಾಲೇಜುಗಳಿಗೆ ಸೂಚಿಸಿದೆ.
ಸಂಯೋಜಿತ ಕಾಲೇಜುಗಳ ಮನವಿ ಮೇರೆಗೆ ತರಗತಿಗಳ ಆರಂಭದ ವಿಚಾರವನ್ನು ಬೋರ್ಡ್ ಆಫ್ ಸ್ಟಡೀಸ್‌ನಲ್ಲಿ ಚರ್ಚೆ ಮಾಡಿ ದಿನಾಂಕವನ್ನು ನಿಗದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾಲೇಜಿನ ಪ್ರಾಂಶುಪಾಲರು ಮತ್ತು ನಿರ್ದೇಶಕರು ನಿಗದಿ ಪಡಿಸಿರುವ ದಿನಾಂಕದ ಪ್ರಕಾರವಾಗಿ ತರಗತಿಗಳನ್ನು ಆರಂಭಿಸುವಂತೆ ವಿಟಿಯು ಸೂಚಿಸಿದೆ.
ಚಿತ್ರದುರ್ಗ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ವೀರೇಶ್ ವಿ ಚಳ್ಳಕೆರೆ ಆಯ್ಕೆ








