ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕಕ್ಕೆ ನಿನ್ನೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಕ್ಕೆ ಜಯ್ಯಣ್ಣ ಬೆಳಗೆರೆ ಹಾಗೂ ರಘು ಹೆಚ್ಚು ಮತಗಳನ್ನು ಗಳಿಸುವ ಮೂಲಕ ವಿಜೇತರಾಗಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಟಿ.ಸಿ ಕಾಂತರಾಜ್ ಮಾಹಿತಿ ನೀಡಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಯಿತು. ಮತಏಣಿಕೆಯ ನಂತ್ರ ಆಯ್ಕೆಯಾದ ಪದಾಧಿಕಾರಿಗಳು, ರಾಜ್ಯ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಕಾರ್ಯಕಾರಿಣಿ ಸದಸ್ಯರ ವಿವರ ಈ ಕೆಳಗಿನಂತಿದೆ ಎಂಬುದಾಗಿ ತಿಳಿಸಿದ್ದಾರೆ.

ತುಮಕೂರು ಜಿಲ್ಲಾ ಘಟಕದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸುವರ್ಣ ನ್ಯೂಸ್ ಯೋಗೇಶ್ ಅವರು ಚುನಾಯಿತರಾಗಿದ್ದರೇ, ಉಪಾಧ್ಯಕ್ಷರಾಗಿ ಜಯ್ಯಣ್ಣ ಸಿ ಜಯನುಡಿ, ದಶರಥ ಚುನಾಯಿತರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಏಕೇಶ್ ಪತ್ರಿಕೆಯ ಟಿಇ ರಘುರಾಮ್ ಆಯ್ಕೆಯಾಗಿದ್ದಾರೆ.

ಇನ್ನು ಕಾರ್ಯದರ್ಶಿಯಾಗಿ ರಂಗಧಾಮಯ್ಯ ಕೊರಟಗೆರೆ, ಯಶಸ್ ಕೆ ಪದ್ಮನಾಭ, ನಂದೀಶ್ ಬಿಎಲ್ ತುರುವೇಕೆರೆ ಚುನಾಯಿತರಾಗಿದ್ದಾರೆ. ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜಗನ್ನಾಥ್ ಕಾಳೇನಹಳ್ಳಿ, ತುಮಕೂರು ಮಿತ್ರ ಪತ್ರಿಕೆಯ ಮಂಜುನಾಥ್.ಪಿಎಸ್, ಪುರುಷೋತ್ತಮ ಕೊರಟಗೆರೆ, ನ್ಯೂಸ್ ಫಸ್ಟ್ ಮಧು, ಮಾರುತಿ ಗಂಗಹನುಮಯ್ಯ, ಜಯಣ್ಣ ಹೆಚ್ ಬೆಳಗೆರೆ, ಹೆಚ್ ಎಂ ಅಶೋಕ ಕುಣಿಗಲ್, ತುಮಕೂರು ವಾರ್ತೆ ಪತ್ರಿಕೆಯ ಎಸ್ ಸುರೇಶ್ ವತ್ಸ, ಪ್ರಜಾಶಕ್ತಿ ಟಿವಿಯ ಹೇಮಂತ ಎನ್, ತಿಪಟೂರಿನ ಹೆಚ್.ಬಿ ಸುಪ್ರತೀಕ್, ಪ್ರಜಾ ಕಹಳೆ ಪತ್ರಿಕೆಯ ರಘು.ಎ.ಎನ್, ವಿಜಯವಾಣಿಯ ದೊಡ್ಡೇರಿ ಕಣಿಮಯ್ಯ, ವಿಜಯ್, ಕೆಟಿಎಂ ಮಾರುತಿ ಪ್ರಸಾದ್, ಮೆಳೇಕಲ್ಲಹಳ್ಳಿಯ ಯೋಗೀಶ್ ಚುನಾಯಿತರಾಗಿದ್ದಾರೆ.

ಖಜಾಂಚಿಯಾಗಿ ಸತೀಶ್ ಹಾರೋಗೆರೆ, ರಾಜ್ಯ ಕಾರ್ಯಕಾರಿ ಸಮಿತಿಗೆ ಚಿ.ನಿ ಪುರುಷೋತ್ತಮ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿಲ್ಲಾ ಚುನಾವಣಾಧಿಕಾರಿ ಟಿ.ಸಿ ಕಾಂತರಾಜ್ ಘೋಷಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು









