ಫರಿದಾಬಾದ್ : ಹರಿಯಾಣದ ಫರಿದಾಬಾದ್ ನಲ್ಲಿರುವ ವೈದ್ಯರ ಮನೆಯಿಂದ ಜಮ್ಮು ಪೊಲೀಸರು ಅಪಾರ ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ವೈದ್ಯರು ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ಪೊಲೀಸರು ಅವರ ಕೊಠಡಿಯಿಂದ ಸುಮಾರು 300 ಕೆಜಿ RDX, AK-47 ರೈಫಲ್, 84 ಕಾರ್ಟ್ರಿಡ್ಜ್ಗಳು ಮತ್ತು ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ. ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ತಂಡವು ಸ್ಥಳೀಯ ಪೊಲೀಸರ ಸಹಯೋಗದೊಂದಿಗೆ ಮನೆ ಮೇಲೆ ದಾಳಿ ನಡೆಸಿತು.
ಮೂಲಗಳ ಪ್ರಕಾರ, ಈ ಕಾರ್ಯಾಚರಣೆಯು ಭಯೋತ್ಪಾದಕ ಸಂಘಟನೆ ಅನ್ಸರ್ ಘಜ್ವತ್-ಉಲ್-ಹಿಂದ್ (AGH) ತನಿಖೆಯ ಭಾಗವಾಗಿದೆ. ಈ ಸಂಘಟನೆಯೊಂದಿಗೆ ಮೂವರು ವೈದ್ಯರು ಸಂಬಂಧ ಹೊಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರಲ್ಲಿ ಇಬ್ಬರು, ಆದಿಲ್ ಅಹ್ಮದ್ ರಾಥರ್ (ಅನಂತ್ನಾಗ್ ನಿವಾಸಿ) ಮತ್ತು ಮುಜಮ್ಮಿಲ್ ಶಕೀಲ್ (ಪುಲ್ವಾಮಾ ನಿವಾಸಿ) ಅವರನ್ನು ಸಹರಾನ್ಪುರ ಮತ್ತು ಫರಿದಾಬಾದ್ನಿಂದ ಬಂಧಿಸಲಾಗಿದ್ದು, ಮೂರನೇ ವೈದ್ಯ ಇನ್ನೂ ತಲೆಮರೆಸಿಕೊಂಡಿದ್ದಾನೆ.








