ಮೈಸೂರು : ಮೈಸೂರಿನ ಶಾಲೆಯಲ್ಲಿ ಬಾಲಕರಿಂದ ರ್‍ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ನಡೆಸಿದ್ದಾರೆ.
ಜಯಲಕ್ಷ್ಮಿ ಪುರಂ ಠಾಣೆ ಪೊಲೀಸರು ಇದೀಗ ಶಾಲಾ ಆಡಳಿತ ಮಂಡಳಿ A1 ಹಾಗೂ ಮೂವರು ಬಾಲಕರ ಮೇಲೆ J1, J2, J3 ಆಗಿ ಎಫ್ ಐಆರ್ ದಾಖಲಿಸಿದ್ದಾರೆ.
13 ವರ್ಷದ ಬಾಲಕನ ಮೇಲೆ ಮೂವರಿಂದ ಹಾಲೆ ನಡೆದಿದ್ದು, ಬಾಲಕನ ಮರ್ಮಾಂಗಕ್ಕೆ ಮೂವರು ಬಾಲಕರು ಒದ್ದಿದ್ದಾರೆ ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ.
ಹಲ್ಲೆಯಿಂದ ಬಾಲಕನ ಮರ್ಮಾಂಗಕ್ಕೆ ಗಂಭೀರವಾದ ಗಾಯಗಳಾಗಿವೆ. ಎಂಟನೇ ತರಗತಿಗೆ ಬಾಲಕ ಕ್ಲಾಸ ಲೀಡರ್ ಆಗಿದ್ದ ಪ್ರತಿನಿತ್ಯ ಹಣ ಕೊಡು ಮೊಬೈಲ್ ತೆಗೆದುಕೊಂಡು ಬಾ, ನಾವು ಹೇಳಿದ ಹಾಗೆ ಕೇಳು ಮಾಡು ಎಂದು ಮೂರು ಬಾಲಕರು ನಡೆಸಿದ್ದಾರೆ ಅಕ್ಟೋಬರ್ 25ರಂದು ಬಾಲಕನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಶೌಚಾಲಯದಲ್ಲಿ ಬಾಲಕನ ಮರುಮಾಂಗಕ್ಕೆ ಒದಿದ್ದಾರೆ. ಬಾಲಕನ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದಾರೆ.
ಈ ವಿಚಾರವಾಗಿ ಬಾಲಕ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕನ್ನಡ ರಾಜ್ಯೋತ್ಸವ ಹಿನ್ನೆಲೆ ಪ್ರಾಕ್ಟೀಸ್ ಮಾಡುವಾಗ ನಾನು ಶೌಚಾಲಯಕ್ಕೆ ಹೋದೆ ಶೌಚಾಲಯದಲ್ಲಿ ಶಿಕ್ಷಕರಿಗೆ ನಮ್ಮ ಬಗ್ಗೆ ಕಂಪ್ಲೀಟ್ ಮಾಡುತ್ತೀಯಾ ಅಂತ ಹೇಳಿ ಒದಿದ್ದಾರೆ. ಶಿಕ್ಷಕರಿಗೆ ನಮ್ಮ ತಾಯಿ ದೂರು ನೀಡಿದರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 3000 ದುಡ್ಡು ಮೊಬೈಲ್ ಕಸಿದುಕೊಂಡಿದ್ದಾರೆ. ಕ್ಲಾಸ್ ಲೀಡರ್ ಮಾಡಿದಾಗ ನಮ್ಮನ್ನು ಶಿಕ್ಷಕರಿಗೆ ಹಾಕಿಕೊಟ್ಟಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಬಾಲಕ ತಿಳಿಸಿದ್ದಾನೆ.








