ಬೆಂಗಳೂರು: ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ಬಾಲಾಪರಾಧಿ ಎಂಬುದಾಗಿ ಕರೆಯುವುದು ಕಾನೂನು ಬಾಹಿರವಾಗಿದೆ. ಹಾಗೆ ಬಾಲಾಪರಾಧಿ ಎನ್ನುವಂತಿಲ್ಲ. ಇನ್ಮುಂದೆ ಅದರ ಬದಲಾಗಿ ಬೇರೆ ಪದಗಳನ್ನು ಬಳಸುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಆದೇಶ ಹೊರಡಿಸಿದೆ.
ಈ ಕುರಿತಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿದ್ದು, ಬಾಲ ನ್ಯಾಯ( ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015 ಅನ್ನು ಅನುಷ್ಠಾನಗೊಳಿಸುತ್ತಿದ್ದು, ಸದರಿ ಕಾಯ್ದೆಯ ಅನುಸಾರ ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ಬಾಲಾಪರಾಧಿಗಳು ಎಂದು ಮಕ್ಕಳ ಪಾಲನಾ ಸಂಸ್ಥೆಗಳನ್ನು ಸುಧಾರಣಾ ಸಂಸ್ಥೆಗಳು (ಕರೆಕ್ಷನಲ್ ಹೋಮ್ಸ್) ಎಂದು ಕರೆಯುವುದು ಕಾನೂನು ಬಾಹಿರವಾಗಿರುತ್ತದೆ ಎಂದಿದ್ದಾರೆ.
ಆದುದ್ದರಿಂದ ಬಾಲಾಪರಾಧಿಗಳು ಎಂದು ಸಂಬೋಧಿಸುವ ಬದಲು ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳು ಎಂದು ಬಳಸಿ. ರಿಮಾಂಡ್ ಹೋಂ ಎನ್ನುವ ಬದಲು ವೀಕ್ಷಣಾಲಯ ಎಂದು ಬಳಸಬೇಕು. ಸುಧಾರಣಾ ಸಂಸ್ಥೆಗಳು, ಕರೆಕ್ಷನಲ್ ಹೋಮ್ಸ್ ಎಂದು ಸಂಬೋಧಿಸುವ ಬದಲು ಮಕ್ಕಳ ಪಾಲನಾ ಸಂಸ್ಥೆಗಳು ಎಂದು ಸಂಬೋಧಿಸುವಂತೆ ಸೂಚಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

870 ಕೋಟಿ ವೆಚ್ಚದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
BREAKING: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರದ ತಡೆ: ಪರಿಸರವಾದಿಗಳ ಹೋರಾಟಕ್ಕೆ ಗೆಲುವು








