ಶಿವಮೊಗ್ಗ: ಕೇಂದ್ರ ಸರ್ಕಾರವು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಡೆ ನೀಡಿರುವುದಾಗಿ ತಿಳಿದು ಬಂದಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಗೆಲುವು ಆಗಿದೆ. ಆದರೇ ನಮ್ಮ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಯೋಜನೆಯನ್ನು ರದ್ದುಗೊಳಿಸುವವರೆಗೂ ಮುಂದುವರೆಯಲಿದೆ ಎಂಬುದಾಗಿ ರೈತ ಮುಖಂಡ ದಿನೇಶ್ ಶಿರವಾಳ ತಿಳಿಸಿದ್ದಾರೆ.
ಇಂದು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಇಂದು ಕೇಂದ್ರ ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಡೆ ನೀಡಿರುವುದು ಒಂದು ಹಂತದ ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು ಆಗಿದೆ. ನಮ್ಮ ಹೋರಾಟ ಇಲ್ಲಿಗೆ ಕೈ ಬಿಡುವುದಿಲ್ಲ. ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಆಗ ಮಾತ್ರವೇ ನಮ್ಮ ಹೋರಾಟವು ಅಂತ್ಯವಾಗಲಿದೆ ಎಂದರು.
ಇದೇ ನವೆಂಬರ್.11ರಂದು ಶಿವಮೊಗ್ಗದಲ್ಲಿ ದುಂಡುಮೇಜಿನ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗೆಡೆ, ಎಟಿ ರಾಮಸ್ವಾಮಿ, ಗೋಪಾಲಕಗೌಡ, ಚೂನಪ್ಪ ಪೂಜಾರಿ, ಬಂಗಾರಮಕ್ಕಿ ಶ್ರೀ, ಮೂಲೆಗದ್ದೆ ಶ್ರೀಗಳು, ಮೌಲ್ವಿಗಳು, ಫಾದರ್ ಗಳು ಭಾಗಿಯಾಗಲಿದ್ದಾರೆ. ನಮ್ಮ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ, ಯೋಜನೆ ರೂಪಿಸಲಾಗುತ್ತದೆ ಎಂದು ಹೇಳಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರದ ಒಂದು ಇಲಾಖೆಯು ತಡೆ ನೀಡಿರಬೇಕು ಅಷ್ಟೇ. ಇನ್ನೂ ವಿವಿಧ ಇಲಾಖೆಗಳಿದ್ದಾವೆ. ಅವೆಲ್ಲವೂ ತಡೆ ನೀಡಬೇಕು. ಕೇಂದ್ರ, ರಾಜ್ಯ ಸರ್ಕಾರವು ಈ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸುವವರೆಗೂ ನಮ್ಮ ಹೋರಾಟ ಮುಂದುವರೆಸುವುದಾಗಿ ರೈತ ಮುಖಂಡ ದಿನೇಶ್ ಶಿರವಾಳ ಹೇಳಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: KUWJ ರಾಜ್ಯಾಧ್ಯಕ್ಷರಾಗಿ ‘ಶಿವಾನಂದ ತಗಡೂರ’ ಅವಿರೋಧವಾಗಿ ಆಯ್ಕೆ: ಚುನಾವಣಾಧಿಕಾರಿ ಅಧಿಕೃತ ಘೋಷಣೆ
BREAKING: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರದ ತಡೆ: ಪರಿಸರವಾದಿಗಳ ಹೋರಾಟಕ್ಕೆ ಗೆಲುವು








