ಬೆಂಗಳೂರು: ಅಂದು ಸಂತ ಶ್ರೇಷ್ಠ ಕನಕದಾಸರಂತೆ ಇಂದು ದೀನದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕಾಣುತ್ತಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅಭಿಪ್ರಾಯಪಟ್ಟರು.
ಸಂತ ಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಿಮ್ಮಪ್ಪ ನಾಯಕನೆಂಬ ಹೆಸರಿನಿಂದ ಬೆಳೆದ ಕನಕದಾಸರಿಗೆ ಸಮಾಜದ ಕಡುಬಡವರನ್ನು, ದೀನದಲಿತರನ್ನು ಕಂಡರೆ ಅಪಾರ ವಾತ್ಸಲ್ಯ. ಅದರಂತೆ ಸಿದ್ದರಾಮಯ್ಯ ಅವರು ಕೂಡ ದೀನದಲಿತರ ಬಗ್ಗೆ ಅಪಾರವಾದ ವಾತ್ಸಲ್ಯ ಹೊಂದಿದ್ದಾರೆ ಎಂದು ಹೇಳಿದರು.
ಎಲ್ಲರೂ ಭಾಷಣಕ್ಕೆ ಮಾತ್ರ ಸೀಮಿತವಾಗುತ್ತಾರೆ. ಆದರೆ ನಮ್ಮ ಮುಖ್ಯಮಂತ್ರಿಗಳು ದೇಶದ ಇತಿಹಾಸದಲ್ಲೇ ರಾಜ್ಯ ಬಜೆಟ್ ನ ಒಟ್ಟು ಗಾತ್ರದಲ್ಲಿ ಶೇ.24.1ರಷ್ಟು ಅನುದಾನವನ್ನು ದೀನದಲಿತರಿಗೆ ಮೀಸಲಿಟ್ಟಿದ್ದಾರೆ. ಇದು ಕಾರ್ಯ ಮಾಡಲು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ. ಇದು ಆ ಸಮುದಾಯದವರ ಬಗ್ಗೆ ಅವರು ಹೊಂದಿರುವ ಕಾಳಜಿ ಮತ್ತು ವಾತ್ಸಲ್ಯವನ್ನು ತೋರುತ್ತದೆ ಎಂದರು.
ಸಿಎಂರಿಂದ ಅಹಿಂದ ಗಟ್ಟಿ: ಸಿದ್ದರಾಮಯ್ಯ ಅವರು ಅಹಿಂದವನ್ನು ಹುಟ್ಟು ಹಾಕಿದಾಗ ಕಾಲೇಜು ವ್ಯಾಸಂಗ ಮಾಡುತ್ತಿದ್ದ ನಾನು ಅಚ್ಚರಿಪಟ್ಟಿದೆ. ಅಂದು ನೀರು ಹಾಕಿ ಬೆಳೆಸಿದ್ದಕ್ಕೆ ಇಂದು ಅಹಿಂದ ಸಮಾಜ ಗಟ್ಟಿಯಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೇವಲ ಹಿಂದುಳಿದ ಸಮುದಾಯವರಿಗೆ ಮಾತ್ರವಲ್ಲ, ಪ್ರತಿಯೊಂದು ಸಮುದಾಯದ ವಾಸ್ತವ ಸ್ಥಿತಿ ತಿಳಿಯಲು ಸಮೀಕ್ಷೆ ಬಡೆಸಲಾಗಿದೆ. ಸಮೀಕ್ಷೆ ನಡೆಸುವ ವೇಳೆ ಅನಗತ್ಯವಾಗಿ ಹಲವು ವಿರೋಧಗಳು ವ್ಯಕ್ತವಾದವು. ಸಮಾಜದಲ್ಲಿ ಪ್ರಭಾವಿಗಳು ಎನಿಸಿಕೊಂಡವರು ನಾವು ದಲಿತರಲ್ಲ, ಹಿಂದುಳಿದವರಲ್ಲ ಹೀಗಾಗಿ ನಾವು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದರು. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಯಾವ ಹೇಳಿಕೆಗೂ ಸೊಪ್ಪು ಹಾಕಲಿಲ್ಲ ಎಂದು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಹರಿಹಾಯ್ದರು.
ಜನರನ್ನು ತಪ್ಪು ದಾರಿ ಎಳೆಯಬಾರದು:
ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗಬಾರದು. ಸರ್ಕಾರ ನಡೆಸಿರುವ ಸಮೀಕ್ಷೆ ಸಮಾಜದ ಪ್ರತಿಯೊಂದು ಸಮುದಾಯದವರ ಬಗ್ಗೆ ತಿಳಿಯಲು. ಇಂದು ಎಲ್ಲಾ ಸಮಾಜದವರ ಬಗ್ಗೆ ಕಳಕಳಿ ಹೊಂದಿದ್ದ ಮುಖ್ಯಮಂತ್ರಿ ಯಾರಾದರೂ ಇದ್ದರೆ ಸಿದ್ದರಾಮಯ್ಯ ಅವರು ಮಾತ್ರ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.
ಇನ್ನು ಕನಕದಾಸರು ಒಂದು ಸಮುದಾಯಕ್ಕೆ ಸೀಮಿಯವಾದವರಲ್ಲ. ಜಾತಿ ಪದ್ಧತಿ ಮತ್ತು ಮೌಢ್ಯತೆ ವಿರುದ್ಧ ಧ್ವನಿ ಎತ್ತಿದ್ದ ಮಹನೀಯರು. ಸರ್ವರಿಗೂ ಅತ್ಯಂತ ಸುಲಭವಾದ ರೀತಿಯಲ್ಲಿ ಜೀವನದ ತತ್ವಗಳನ್ನು ಆಡುಭಾಷೆಯಲ್ಲಿ ಸಾರಿದ ದಾಸಪಂಥದ ಪ್ರಮುಖ ಹರಿದಾಸರಲ್ಲಿ ಕನಕದಾಸರು ಹೆಸರು ಅವಿಸ್ಮರಣೀಯ ಎಂದರು.
ನೀವು ಪ್ರತಿದಿನ ಸೇವಿಸಬೇಕಾದ ‘ಟಾಪ್ ಕ್ಯಾನ್ಸರ್ ವಿರೋಧಿ’ ಆಹಾರಗಳಿವು | Anti-Cancer Foods
ಒಂದು ಹನಿಯಿಂದ್ಲೂ ದೊಡ್ಡ ಹಾನಿ ; ‘ಮದ್ಯ’ ನಿಮ್ಮ ಮೆದುಳನ್ನ ಹೇಗೆ ಹಾನಿ ಮಾಡುತ್ತೆ ಅಂತಾ ತಿಳಿದ್ರೆ ಶಾಕ್ ಆಗ್ತೀರಾ!








