ಬೆಂಗಳೂರು: ದೇಶದ ಇತಿಹಾಸದಲ್ಲೇ ಇದೇ ಮೊದಲು ಎನ್ನುವಂತೆ ಪ್ರತಿಯೊಬ್ಬ ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ 2026ನೇ ಸಾಲಿನ ಕ್ಯಾಲೆಂಡರ್ ವಿತರಣೆ ಮಾಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ಮೂಲಕವಾಗಿ ಪ್ರತಿಯೊಬ್ಬ ನೌಕರನಿಗೂ, ಶಿಕ್ಷಕರಿಗೂ 2026ರ ಕ್ಯಾಲೆಂಡರ್ ನೀಡುತ್ತಿರುವುದು ದೇಶದ ಇತಿಹಾಸದಲ್ಲೇ ಇದೇ ಮೊದಲು ಎಂದಿದ್ದಾರೆ.
ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಈ ವಿನೂತನ ಪ್ರಯತ್ನ ಮಾಡಲಾಗುತ್ತಿದೆ. ಪ್ರತಿಯೊಬ್ಬ ನೌಕರರ, ಶಿಕ್ಷಕರ ಕರ್ತವ್ಯ ನಿರತ ಸ್ಥಳಕ್ಕೆ ಆಯಾ ಜಿಲ್ಲಾ ಮತ್ತು ತಾಲ್ಲೂಕು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕ್ಯಾಲೆಂಡರ್ ತಲುಪಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಒಂದು ಹನಿಯಿಂದ್ಲೂ ದೊಡ್ಡ ಹಾನಿ ; ‘ಮದ್ಯ’ ನಿಮ್ಮ ಮೆದುಳನ್ನ ಹೇಗೆ ಹಾನಿ ಮಾಡುತ್ತೆ ಅಂತಾ ತಿಳಿದ್ರೆ ಶಾಕ್ ಆಗ್ತೀರಾ!
ಅದೃಷ್ಟ ಅಂದ್ರೆ ಇದಪ್ಪಾ! ಸಾಲ ಮಾಡಿ ಖರೀದಿಸಿದ ಲಾಟರಿಯಿಂದ ’11 ಕೋಟಿ’ ಗೆದ್ದ ತರಕಾರಿ ವ್ಯಾಪಾರಿ | Lottery Jackpot








