Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಲೇಹ್ ಲಡಾಖ್ ನಲ್ಲಿ 5.7 ತೀವ್ರತೆಯ ಭೂಕಂಪ | Earthquake

19/01/2026 12:21 PM

ALERT : ಮೂಗಿನ ಕೂದಲನ್ನು ಕತ್ತರಿಸುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ.!

19/01/2026 12:12 PM

BREAKING : ಜ.22 ರ ಸಂಜೆ 4 ಗಂಟೆಗೆ ರಾಜ್ಯ ಸರ್ಕಾರದ ಮಹತ್ವದ `ಸಚಿವ ಸಂಪುಟ ಸಭೆ’ ನಿಗದಿ |Karnataka Cabinet Meeting

19/01/2026 12:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ `ಲೈಂಗಿಕ ದೌರ್ಜನ್ಯ’ ತಡೆಗೆ `ಆಂತರಿಕಾ ದೂರು ಸಮಿತಿ ರಚನೆ ಕಡ್ಡಾಯ.!
KARNATAKA

BIG NEWS : ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ `ಲೈಂಗಿಕ ದೌರ್ಜನ್ಯ’ ತಡೆಗೆ `ಆಂತರಿಕಾ ದೂರು ಸಮಿತಿ ರಚನೆ ಕಡ್ಡಾಯ.!

By kannadanewsnow5708/11/2025 3:08 PM

ರಾಜ್ಯ ಸರ್ಕಾರಿ ಕಚೇರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ತಡೆಯಲು ಸುಪ್ರೀಂ ಕೋರ್ಟ್ ಆದೇಶದಂತೆ ಕಡ್ಡಾಯವಾಗಿ ಆಂತರಿಕಾ ದೂರು ನಿವಾರಣಾ ಸಮಿತಿ ರಚಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿAದು ಮಹಿಳಾ ಸ್ಪಂದನಾ ಮತ್ತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸ್ವೀಕೃತವಾದ ದೂರುಗಳನ್ನು ಪರಿಹರಿಸಲು ಸೂಕ್ಷö್ಮವಾಗಿ ಗಮನಿಸಿ ಮುಲಾಜಿಲ್ಲದೆ ಸೂಕ್ತವಾದ ನಿರ್ಧಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಪ್ರವಾಸದ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಸಂಘ ಸಂಸ್ಥೆಗಳು ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ ಸಮಿತಿ ರಚನೆ ಮಾಡಿದ್ದರಾ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಯುತ್ತಿದೆಯಾ ಎಂದು ಪರಿಶೀಲಿಸಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ವರ್ಷದಲ್ಲಿ 279 ಕಾಣೆಯಾದ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿದ್ದು, 236 ಪ್ರಕರಣ ಪತ್ತೆ ಮಾಡಲಾಗಿದೆ. ಉಳಿದ 43 ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇತ್ತೀಚೆಗೆ ವಿವಾಹ ವಿಚ್ಛೇಧನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆಗೆ ಮುನ್ನ ಹುಡುಗ-ಹುಡುಗಿಗೆ ಸಮಾಲೋಚನೆ ನಡೆಸುವ ನಿಟ್ಟಿನಲ್ಲಿ ರಾಷ್ಟಿçÃಯ ಮಹಿಳಾ ಆಯೋಗದಿಂದ ನನ್ನ-ನಿನ್ನ ಕನಸು ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ. ರಾಜ್ಯದಲ್ಲಿ ಈ ಕಾರ್ಯಕ್ರಮ ಇನ್ನೂ ಯಾವ ಜಿಲ್ಲೆಯಲ್ಲಿ ಆರಂಭಿಸಿಲ್ಲ, ಹಾಸನ ಜಿಲ್ಲೆಯಿಂದಲೇ ಮೊದಲು ಪ್ರಾರಂಭವಾಗಲಿ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಯುವಕ ಯುವತಿಯರು ಮದುವೆಯಾಗಿ ಒಂದು ವರ್ಷದೊಳಗೆ ವಿಚ್ಚೇದನ ತೆಗೆದುಕೊಳ್ಳುವ ಸ್ಥಿತಿಗೆ ತಲುಪುತ್ತಿದ್ದಾರೆ. ಅವರಲ್ಲಿ ತಾಳ್ಮೆ ಕಡಿಮೆಯಿರುವುದು ಕಂಡುಬರುತ್ತಿದೆ. ಇದನ್ನು ತಪ್ಪಿಸಿ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು ಆ ಕಾರಣಕ್ಕೆ ಮದುವೆಯ ಪೂರ್ವದಲ್ಲಿ ಯುವಕ ಯುವತಿಯರ ತಂದೆ ತಾಯಿಗಳು ಕುಳಿತು ಚರ್ಚೆ ಮಾಡಿ ಎರಡು ಕುಟುಂಬಗಳು ಮದುವೆ ಒಪ್ಪಂದ ಮಾಡಿಕೊಂಡು ಮುಂದುವರೆಯಬೇಕು ಆಗ ಸಮಾಜದಲ್ಲಿ ಸಂಸ್ಕಾರಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅಸಂಘಟಿತ ಕಾರ್ಮಿಕರು ದೂರು ನೀಡಲು ಸಹಕಾರಿಯಾಗುವಂತೆ ಜಿಲ್ಲಾ ಮಟ್ಟದ ದೂರು ನಿವಾರಣಾ ಸಮಿತಿಯ ಕುರಿತು ಜಿಲ್ಲಾಧಿಕಾರಿ ಕಚೇರಿ ನಾಮಫಲಕದಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.

ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ ಗಮನಿಸಿದ್ದು, ಬಿ.ಸಿ.ಎಂ. ಹಾಸ್ಟೆಲ್‌ಗಳಲ್ಲಿ ಗೊಡೆ ಕುಸಿಯುವ ಹಂತದಲ್ಲಿದೆ ಇಂತಹವುಗಳ ಬಗ್ಗೆ ಗಮನಹರಿಸಿ ಮಕ್ಕಳಿಗೆ ತೊಂದರೆಯಾಗದAತೆ ಕ್ರಮವಹಿಸಿ ಎಂದರಲ್ಲದೆ, ಹೆಣ್ಣು ಮಕ್ಕಳ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಸ್ಪಂದನ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ನಡೆಯುವ ಜನ ಸ್ಪಂದನ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಿ ಎಂದು ತಿಳಿಸಿದರು.

ಶಾಲಾ, ಕಾಲೇಜುಗಳಲ್ಲಿ ಮಕ್ಕಳಿಗೆ ಬ್ಯಾಡ್ ಮತ್ತು ಗುಡ್ ಟಚ್ ಬಗ್ಗೆ ಜಾಗೃತಿ ಮೂಡಿಸಿ ಎಂದರಲ್ಲದೆ, ತುರ್ತು ಸಹಾಯವಾಣಿ ಸಂಖ್ಯೆಯನ್ನು ಫಲಕಗಳಲ್ಲಿ ಅಳವಡಿಸುವಂತೆ ಸೂಚನೆ ನೀಡಿದರು.

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲು ಕ್ರಮವಹಿಸಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು,ಮಾಹಿಳಾ ಆಯೋಗದ ಕಾರ್ಯದರ್ಶಿ ರೂಪ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

BIG NEWS: Formation of an 'internal complaints committee' is mandatory to prevent 'sexual harassment' in workplaces where women work!
Share. Facebook Twitter LinkedIn WhatsApp Email

Related Posts

ALERT : ಮೂಗಿನ ಕೂದಲನ್ನು ಕತ್ತರಿಸುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ.!

19/01/2026 12:12 PM2 Mins Read

BREAKING : ಜ.22 ರ ಸಂಜೆ 4 ಗಂಟೆಗೆ ರಾಜ್ಯ ಸರ್ಕಾರದ ಮಹತ್ವದ `ಸಚಿವ ಸಂಪುಟ ಸಭೆ’ ನಿಗದಿ |Karnataka Cabinet Meeting

19/01/2026 12:07 PM1 Min Read

BIG NEWS : 50 ಲಕ್ಷದಲ್ಲಿ ಜಮೀನು ತಗೊಂಡು ವ್ಯವಸಾಯ ಮಾಡ್ತೀನಿ: : ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಫಸ್ಟ್ ರಿಯಾಕ್ಷನ್‌

19/01/2026 11:56 AM1 Min Read
Recent News

BREAKING: ಲೇಹ್ ಲಡಾಖ್ ನಲ್ಲಿ 5.7 ತೀವ್ರತೆಯ ಭೂಕಂಪ | Earthquake

19/01/2026 12:21 PM

ALERT : ಮೂಗಿನ ಕೂದಲನ್ನು ಕತ್ತರಿಸುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ.!

19/01/2026 12:12 PM

BREAKING : ಜ.22 ರ ಸಂಜೆ 4 ಗಂಟೆಗೆ ರಾಜ್ಯ ಸರ್ಕಾರದ ಮಹತ್ವದ `ಸಚಿವ ಸಂಪುಟ ಸಭೆ’ ನಿಗದಿ |Karnataka Cabinet Meeting

19/01/2026 12:07 PM

BREAKING: ಛತ್ತೀಸ್ ಗಢದಲ್ಲಿ IED ಸ್ಫೋಟ: ಓರ್ವ ವ್ಯಕ್ತಿ ಸಾವು | Blast

19/01/2026 12:01 PM
State News
KARNATAKA

ALERT : ಮೂಗಿನ ಕೂದಲನ್ನು ಕತ್ತರಿಸುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ.!

By kannadanewsnow5719/01/2026 12:12 PM KARNATAKA 2 Mins Read

ಮೂಗು ಕಶೇರುಕಗಳಲ್ಲಿ ಕಂಡುಬರುವ ರಂಧ್ರವಾಗಿದೆ. ಇದರ ಮೂಲಕ, ಉಸಿರಾಟದಲ್ಲಿ ಬಳಸುವ ಗಾಳಿಯು ದೇಹವನ್ನು ಪ್ರವೇಶಿಸುತ್ತದೆ. ನಮ್ಮ ದೇಹದ ವಿವಿಧ ಭಾಗಗಳಲ್ಲಿ…

BREAKING : ಜ.22 ರ ಸಂಜೆ 4 ಗಂಟೆಗೆ ರಾಜ್ಯ ಸರ್ಕಾರದ ಮಹತ್ವದ `ಸಚಿವ ಸಂಪುಟ ಸಭೆ’ ನಿಗದಿ |Karnataka Cabinet Meeting

19/01/2026 12:07 PM

BIG NEWS : 50 ಲಕ್ಷದಲ್ಲಿ ಜಮೀನು ತಗೊಂಡು ವ್ಯವಸಾಯ ಮಾಡ್ತೀನಿ: : ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಫಸ್ಟ್ ರಿಯಾಕ್ಷನ್‌

19/01/2026 11:56 AM

BREAKING : ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ : ರಾಜ್ಯದ `PU ಕಾಲೇಜು’ಗಳಲ್ಲಿ `ಮೊಬೈಲ್’ ಬಳಕೆ ನಿಷೇಧಕ್ಕೆ ಚಿಂತನೆ.!

19/01/2026 11:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.