ಬೆಂಗಳೂರು: ಸೊರಬ ಪುರಸಭೆಯ ಸದಸ್ಯರ ಅವಧಿಯು ಮುಕ್ತಾಯಗೊಂಡ ಹಿನ್ನಲೆಯಲ್ಲಿ ದಿನಾಂಕ 24-10-2025ರಿಂದ ಜಾರಿಗೆ ಬರುವಂತೆ ಸಾಗರದ ಉಪ ವಿಭಾಗಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಶೇಷ ರಾಜ್ಯ ಪತ್ರ ಪ್ರಕಟಿಸಿದ್ದು, ದಿನಾಂಕ 24-10-2025ರಿಂದ ಜಾರಿಗೆ ಬರುವಂತೆ ಸೊರಬ ಪುರಸಭೆಗೆ ಅಡಳಿತಾಧಿಕಾರಿಯನ್ನಾಗಿ ಸಾಗರದ ಉಪ ವಿಭಾಗಾಧಿಕಾರಿಯನ್ನು ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ.
ಇದಲ್ಲದೇ ಸಾಗರ ನಗರಸಭೆಗೂ ದಿನಾಂಕ 30-10-2025ರಿಂದ ಜಾರಿಗೆ ಬರುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಅಲ್ಲದೇ ಹೊಸನಗರ ಪಟ್ಟಣ ಪಂಚಾಯ್ತಿಗೆ ದಿನಾಂಕ 04-11-2025ರಿಂದ ಜಾರಿಗೆ ಬರುವಂತೆ ಹೊಸನಗರ ತಹಶೀಲ್ದಾರ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿಗೆ ದಿನಾಂಕ 05-11-2025ರಿಂದ ಜಾರಿಗೆ ಬರುವಂತೆ ಸಾಗರ ತಹಶೀಲ್ದಾರ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು






BREAKING: ರಾಜ್ಯದ 42 ನಗರಸಭೆ, 53 ಪುರಸಭೆ, 23 ಪಟ್ಟಣ ಪಂಚಾಯ್ತಿಗಳಿಗೆ ‘ಆಡಳಿತಾಧಿಕಾರಿ’ ನೇಮಿಸಿ ಸರ್ಕಾರ ಆದೇಶ
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲಾಗದ ಸಿಎಂ ಸಿದ್ಧರಾಮಯ್ಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ: HDK








