ಬಿಹಾರ: ಬಿಹಾರ ವಿಧಾನಸಭಾ ಚುನಾವಣೆ-2025ಕ್ಕೆ ಇಂದು ಮೊದಲ ಹಂತಕ್ಕೆ ಮತದಾನ ನಡೆಯುತ್ತಿದೆ. ಇದೀಗ ದೊರೆತಂತ ಅಂಕಿ ಅಂಶದ ಪ್ರಕಾರವಾಗಿ ಇಂದಿನ ಮೊದಲ ಹಂತದ ಮತದಾನದ ವೇಳೆಯಲ್ಲಿ ಇದುವರೆಗೆ 60.25% ಮತದಾನವಾಗಿದೆ. ಬೇಗುಸರಾಯ್ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ನಡೆದಿರುವುದಾಗಿ ತಿಳಿದು ಬಂದಿದೆ.
60.25% approximate voter turnout recorded in the first phase of #BiharElection2025, as per Election Commission of India pic.twitter.com/pPOLfijkpB
— ANI (@ANI) November 6, 2025
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ರಾಜ್ಯದಲ್ಲಿ ಆರಂಭವಾಗಿದೆ. ರಾಜ್ಯದ ಒಟ್ಟು 243 ಸ್ಥಾನಗಳ ಪೈಕಿ 18 ಜಿಲ್ಲೆಗಳ 121 ಕ್ಷೇತ್ರಗಳಲ್ಲಿ 1,314 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಇಂದು ಸ್ಪರ್ಧಿಸುತ್ತಿರುವ ಪ್ರಮುಖರಲ್ಲಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್, ಅವರ ಸಹೋದರ ಮತ್ತು ಜನಶಕ್ತಿ ಜನತಾದಳ (ಜೆಜೆಡಿ) ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್, ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ ಮತ್ತು ಅನಂತ್ ಸಿಂಗ್ ಸೇರಿದ್ದಾರೆ.
ಭದ್ರತಾ ಕಾರಣಗಳಿಂದಾಗಿ, ಸಿಮ್ರಿ ಭಕ್ತಿಯಾರ್‌ಪುರ, ಮಹಿಷಿ, ತಾರಾಪುರ, ಮುಂಗೇರ್, ಜಮಾಲ್‌ಪುರ ಮತ್ತು ಸೂರ್ಯಗಢ ಕ್ಷೇತ್ರದ ವ್ಯಾಪ್ತಿಯ 56 ಬೂತ್‌ಗಳಲ್ಲಿ ಮತದಾನದ ಅವಧಿಯನ್ನು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಕಡಿಮೆ ಮಾಡಲಾಗಿದೆ.
ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಮಹಾಘಟಬಂಧನ್ ವಿಧಾನಸಭಾ ಚುನಾವಣೆಯಲ್ಲಿ ಬಲವಾದ ಪುನರಾಗಮನದ ಆಶಯದೊಂದಿಗೆ ಸ್ಪರ್ಧಿಸುತ್ತಿದೆ.
2025 ರ ಬಿಹಾರ ಚುನಾವಣೆಯ ಮೊದಲ ಹಂತದಲ್ಲಿ ಅಂದಾಜು 60.25% ಮತದಾನ ದಾಖಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.
‘ಜಿಯೋ IPO’ 17,000 ಕೋಟಿ ‘ಅಮೆರಿಕನ್ ಡಾಲರ್’ವರೆಗೆ ಮೌಲ್ಯಮಾಪನ ನಿರೀಕ್ಷೆ: ಬ್ಲೂಮ್‌ಬರ್ಗ್
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ, ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಭೇಟಿ








