ಬೆಂಗಳೂರು: 3,500 ಪ್ರತಿ ಟನ್ ಕಬ್ಬಿಗೆ ನೀಡಬೇಕು ಎಂಬುದಾಗಿ ರೈತರು ಒತ್ತಾಯಿಸುತ್ತಿದ್ದಾರೆ. ನಾನು ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನಾವು 3,200 ರೂಪಾಯಿ ಪ್ರತಿ ಟನ್ ಕಬ್ಬಿಗೆ ನೀಡಲು ನಿರ್ಧರಿಸಿದ್ದೇವೆ. 11.25 ರಿಕವರಿ ಬಂದರೇ 3,500 ರೂಪಾಯಿ, 10.25 ರಿಕವರಿ ಬಂದರೇ 3,100 ರೂಪಾಯಿ ಪ್ರತಿ ಟನ್ ಗೆ ನೀಡಲಾಗುತ್ತದೆ. ಇದನ್ನು ರೈತರಿಗೆ ಈಗಾಗಲೇ ಮುಟ್ಟಿಸಲಾಗಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕಬ್ಬು ಬೆಳೆಗಾರರ ಪ್ರತಿಭಟನೆ ಕುರಿತಂತೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಬೆಳಗಾವಿ, ಬಾಗಲಕೋಟೆ, ಬಿಜಾಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಬಹಳ ಸುದೀರ್ಘವಾಗಿ ಚರ್ಚಿಸಲಾಯಿತು. ನಾನು ಸಚಿವ ಹೆಚ್.ಕೆ ಪಾಟೀಲ್ ಅವರಿಗೂ ರೈತರೊಂದಿಗೆ ಚರ್ಚಿಸುವಂತೆ ಸೂಚಿಸಿದ್ದೆನು. ಅವರು ಹೋಗಿ ರೈತರೊಂದಿಗೆ ಚರ್ಚಿಸಿದ್ದಾರೆ ಎಂದರು.
ನಿನ್ನೆ ರೈತರೊಂದಿಗೆ ಸಚಿವ ಹೆಚ್.ಕೆ ಪಾಟೀಲ್, ಎಂ.ಬಿ ಪಾಟೀಲ್ ಮಾತನಾಡಿದ್ದಾರೆ. ನಾವು ಪ್ರತಿಭಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸುವಂತ ಕೆಲಸ ಮಾಡಿದೆ. ನಮ್ಮ ಸರ್ಕಾರ ಯಾವತ್ತೂ ರೈತರ ಪರವಾಗಿರುವಂತದ್ದಾಗಿದೆ. ಸಕ್ಕರೆ ಕಾರ್ಖನೆಯು ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರುಗಳದ್ದಾಗಿದೆ. ಸತೀಶ್ ಜಾರಕಿಹೊಳಿ ಅವರು ಡಿಸಿ, ಎಸ್ಪಿಯನ್ನು ರೈತರೊಂದಿಗೆ ಮಾತನಾಡಲು ಕಳುಹಿಸಿದ್ದಾರೆ. ಅವರು ಹೋಗಿ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿ ಮಾತನಾಡಿದ್ದಾರೆ ಎಂದರು.
ರೈತರು ಕೇಳುತ್ತಿರುವಂತ ಎಫ್ ಆರ್ ಸಿ ದರವನ್ನು ನಿಗದಿ ಮಾಡಬೇಕಾಗಿರುವುದು ಕೇಂದ್ರ ಸರ್ಕಾರವಾಗಿದೆ. ಈ ವರ್ಷ ದಿನಾಂಕ 06-05-2025ರಂದು ನಿಗದಿ ಮಾಡಿದ್ದಾರೆ. 2025-26ಕ್ಕೆ ಕಬ್ಬು ಬೆಳೆಗೆ ದರ ನಿಗದಿ ಪಡಿಸಲಾಗಿದೆ. ಎಫ್ಆರ್ ಪಿ 10.25 ರಿಕವರಿ ಇದ್ದರೇ, 3,550 ಪ್ರತಿ ಟನ್ ಗೆ ನಿಗದಿ ಪಡಿಸಲಾಗಿದೆ. ಇದು ಟ್ರಾನ್ಸ್ ಪೋರ್ಟ್ ದರವನ್ನು ಒಳಗೊಂಡು ಒಂದು ಟನ್ ಗೆ ನಿಗದಿ ಪಡಿಸಿರುವಂತ ದರವಾಗಿದೆ ಎಂದು ಹೇಳಿದರು.
ಕೇವಲ ಕೇಂದ್ರ ಸರ್ಕಾರ ಎಫ್ಆರ್ ಸಿ ದರ ನಿಗದಿ ಮಾಡುವುದಲ್ಲ. ಸಕ್ಕರೆ ಮೇಲಿನ ದರ ನಿಯಂತ್ರಣವನ್ನು ಮಾಡುವ ಕೆಲಸ ಮಾಡುತ್ತದೆ. 2017-18ರಲ್ಲಿ 17 ರಿಕವರಿ ಪ್ರಮಾಣವಿದ್ದರೇ, 2022-23ರಂದು 10.05ಕ್ಕೆ ಏರಿಕೆಯನ್ನು ಮಾಡಲಾಗಿದೆ. ಈಗ 10.25 ರಿಕವರಿ ಪ್ರಮಾಣ ನಿಗದಿ ಪಡಿಸಲಾಗಿದೆ. ಸಕ್ಕರೆ ಬೆಲೆಯನ್ನು 2019ರಲ್ಲಿ 35 ರೂಪಾಯಿ ಅವರೇ ನಿಗದಿ ಮಾಡಿದ್ದರು. ಅಂದಿನಿಂದ ಇಲ್ಲಿಯರೆಗೆ ಎಂಎಸ್ಪಿಯನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿಲ್ಲ ಎಂದರು.
ಸಕ್ಕರೆ ರಪ್ತು ಮಾಡುವುದನ್ನು ನಿಲ್ಲಿಸಲಾಗಿದೆ. ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ಮಾತ್ರವೇ ರಪ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕರ್ನಾಟಕದಲ್ಲಿ 41 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.
ರೈತರ ಮುಗ್ದತೆಯನ್ನು ಬಳಸಿಕೊಂಡು ರೈತರಿಗೆ ತಪ್ಪು ಮಾಹಿತಿ ನೀಡಿ, ಕೇಂದ್ರ ಸರ್ಕಾರದ ಜವಾಬ್ದಾರಿಯಿದ್ದರೂ ಕೂಡ, ವಿರೋಧ ಪಕ್ಷದವರು ರಾಜಕೀಯ ಮಾಡಲು ಹೊರಟಿದ್ದಾರೆ. ನಾನು ರೈತರಲ್ಲಿ ಮನವಿ ಮಾಡುತ್ತೇನೆ. ವಿರೋಧ ಪಕ್ಷದವರ ಮಾತಿಗೆ ಬಲಿಯಾಗಬೇಡಿ. ನಾಳೆ ಬೆಂಗಳೂರಿನಲ್ಲಿ 11 ಗಂಟೆಗೆ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆಗೆ ಸಭೆ ನಡೆಸಲಾಗುತ್ತಿದೆ. ನಾಳೆಯ ಸಭೆಯಲ್ಲಿ ರೈತರ ಪ್ರತಿಭಟನೆ ಬಗ್ಗೆ, ಎಫ್ಆರ್ ಸಿ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.
ನಾಳೆ 1 ಗಂಟೆಗೆ ರೈತ ಮುಖಂಡರ ಸಭೆಯನ್ನು ಕರೆಯಲಾಗಿದೆ. ಹಾವೇರಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳ ರೈತ ಮುಖಂಡ ಸಭೆಯನ್ನು ಕರೆಯಲಾಗಿದೆ. ಇದರ ಜೊತೆಗೆ ನಾಳೆಯೇ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯುತ್ತಿದ್ದೇನೆ. ನನಗೆ ಭೇಟಿ ನೀಡಲು ಅವಕಾಶ ಮಾಡಿಕೊಡಲು ಪತ್ರ ಬರೆಯುತ್ತಿದ್ದೇನೆ. ಅವರು ತಕ್ಷಣ ಸಮಯ ನೀಡಿದರೇ ದೆಹಲಿಗೆ ತೆರಳಿ, ಅವರನ್ನು ಭೇಟಿ ಮಾಡಿ, ಪ್ರಧಾನ ಮಂತ್ರಿಗಳಿಗೆ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ. ರೈತರ ಪ್ರತಿಭಟನೆ ಬಗ್ಗೆ, ರೈತರ ಒತ್ತಾಯದ ಬಗ್ಗೆ ಚರ್ಚಿಸಲಾಗುವುದು ಎಂದರು.
3,500 ಪ್ರತಿ ಟನ್ ಕಬ್ಬಿಗೆ ನೀಡಬೇಕು ಎಂಬುದಾಗಿ ರೈತರು ಒತ್ತಾಯಿಸುತ್ತಿದ್ದಾರೆ. ನಾನು ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನಾವು 3,200 ರೂಪಾಯಿ ಪ್ರತಿ ಟನ್ ಕಬ್ಬಿಗೆ ನೀಡಲು ನಿರ್ಧರಿಸಿದ್ದೇವೆ. 11.25 ರಿಕವರಿ ಬಂದರೇ 3,500 ರೂಪಾಯಿ, 10.25 ರಿಕವರಿ ಬಂದರೇ 3,100 ರೂಪಾಯಿ ಪ್ರತಿ ಟನ್ ಗೆ ನೀಡಲಾಗುತ್ತದೆ. ಇದನ್ನು ರೈತರಿಗೆ ಈಗಾಗಲೇ ಮುಟ್ಟಿಸಲಾಗಿದೆ ಎಂದರು.
ನಾಳೆ ಸಾಗರದಲ್ಲಿ ಹೆದ್ದಾರಿ ರಸ್ತೆ ತಡೆ, ಕಬ್ಬು ಬೆಳೆಗಾರರಿಗೆ ಬೆಂಬಲ: ರೈತ ಮುಖಂಡ ದಿನೇಶ್ ಶಿರವಾಳ
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ, ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಭೇಟಿ








