ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ, ಫೋಟೋ ವೈರಲ್ ಆದಾಗ ಭಯಪಡೆದೇ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದು.
ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋಗಳು ವೈರಲ್ ಆಗದಂತೆ ತಡೆಯಲು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ. ಸೈಬರ್ ಅಪರಾಧಗಳನ್ನು ದಾಖಲಿಸಲು ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ.
ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಫೋಟೋಗಳು, ವಿಡಿಯೋಗಳು ವೈರಲ್ ಆಗದಂತೆ ತಡೆಯಲು WWW.stopncii.org ಈ ವೆಬ್ ಸೈಟ್ ಗೆ ಹೋಗಿ
ರಿಪೋರ್ಟ್ ಮಾಡಬಹುದು.
ಈ ಹಂತಗಳನ್ನು ಅನುಸರಿಸಿ
ಮೊದಲಿಗೆ Google ಗೆ ಹೋಗಿ
WWW.stopncii.org ವೆಬ್ ಸೈಟ್ ಸರ್ಚ್ ಮಾಡಿ
ಕ್ರಿಯೇಟ್ ಯುವರ ಕೇಸ್ ಅಂತ ಬರುತ್ತೆ ಅದರ ಮೇಲೆ ಕ್ಲಿಕ್ ಮಾಡಿ
ಅಗ್ರಿ ಕ್ಲಿಕ್ ಮಾಡಿ, ಮೈಸೆಲ್ಫ್, ಕ್ಲಿಕ್ ಮಾಡಿ,ಬಳಿಕ ಪ್ರಾವೈಟ್ ಪ್ಲೇಸ್ ಅಂತ ಕ್ಲಿಕ್ ಮಾಡಿ.
ಬಳಿಕ Iam Nude ar semi Nude ಅಂತ ಬರುತ್ತೆ ಅಲ್ಲಿ Yes ಅಂತ ಕ್ಲಿಕ್ ಮಾಡಿದ್ರೆ Next ಅಂತ ಕ್ಲಿಕ್ ಮಾಡಿ.
ನಂತರ Select Photos/Videos ಅಂತ ಕ್ಲಿಕ್ ಮಾಡಿದ್ರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ ಅಥವಾ ವಿಡಿಯೋ ಆಯ್ಕೆ ಮಾಡಿಕೊಳ್ಳಬೇಕು.
ನಂತರ ಪಿನ್ ಮತ್ತು ಇ-ಮೇಲ್ ಅಡ್ರೆಸ್ ಹಾಕಬೇಕು. ನಂತರ ನೆಕ್ಸ್ಟ್ ಅಂತ ಕ್ಲಿಕ್ ಸಬ್ಮಿಟ್ ಮಾಡಿದ್ರೆ ಕೇಸ್ ರಿಪೋರ್ಟ್ ಆಗುತ್ತೆ. ಅಲ್ಲಿ ಕೇಸ್ ನಂಬರ್ ಮತ್ತು ಪಿನ್ ನೆನಪಿಟ್ಟುಕೊಳ್ಳಬೇಕು.







