ಇಂದಿನಿಂದ ಇ-ಪೌತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ದಿನಾಂಕ 05/11/2025 ರಿಂದ 22/11/2025 ರವರೆಗೆ ನಡೆಯಲಿದೆ.
ರೈತರು ಸಂಬಂಧಪಟ್ಟ ನಾಡಕಚೇರಿ ಹಾಗೂ ತಾಲ್ಲೂಕು ಕಛೇರಿಯಲ್ಲಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಕಂದಾಯ ಇಲಾಖೆಯ ಗ್ರಾಮ ಸಹಾಯಕರುಗಳು ಮನೆ ಮನೆಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಲಿದ್ದು, ವಂಶವೃಕ್ಷ, ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ ಹಾಗೂ ಗಣಕೀಕೃತ ಪಹಣಿಗಳನ್ನು ನೀಡಬಹುದಾಗಿರುತ್ತದೆ.
ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು ಇ-ಪೌತಿ ಅಭಿಯಾನಕ್ಕೆ ಸಹಕರಿಸಲು ಕೋರಿದೆ. ಇ-ಪೌತಿ ಅರ್ಜಿ ಸಲ್ಲಿಸಿದ ಒಂದು ವಾರದದೊಳಗೆ ತಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಪೌತಿ ವಾರಸುದಾರರು ಎಲ್ಲರೂ ಒಟಿಪಿ ನೀಡಿದಲ್ಲಿ ಪೌತಿ ಖಾತೆ ದಾಖಲಿಸಲಾಗುವುದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಸನ ತಹಶೀಲ್ದಾರ್ ಅವರು ತಿಳಿಸಿದ್ದಾರೆ.








