ನವದೆಹಲಿ : ಮಲ್ಟಿಪ್ಲೆಕ್ಸ್’ಗಳು ಸಿನಿಮಾ ಟಿಕೆಟ್’ಗಳ ಜೊತೆಗೆ ಮಾರಾಟ ಮಾಡುವ ನೀರಿನ ಬಾಟಲ್, ಕಾಫಿ ಮತ್ತು ಇತರ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ ಮತ್ತು ಪರಿಸ್ಥಿತಿ ಹೀಗೆ ಮುಂದುವರಿದರೆ, ಸಿನಿಮಾ ಹಾಲ್’ಗಳು ಶೀಘ್ರದಲ್ಲೇ ಖಾಲಿಯಾಗುತ್ತವೆ ಎಂದು ಹೇಳಿದೆ. ಕರ್ನಾಟಕ ಹೈಕೋರ್ಟ್ ಮಲ್ಟಿಪ್ಲೆಕ್ಸ್ ಟಿಕೆಟ್ ಬೆಲೆಯನ್ನ 200 ರೂ.ಗೆ ಮಿತಿಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ತಡೆ ವಿಧಿಸಿದ ಷರತ್ತುಗಳನ್ನು ಪ್ರಶ್ನಿಸಿ ಭಾರತೀಯ ಮಲ್ಟಿಪ್ಲೆಕ್ಸ್ ಸಂಘ ಮತ್ತು ಇತರರು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠವು ವಿಚಾರಣೆ ನಡೆಸಿತು.
ಜನರು ಸಿನಿಮಾ ನೋಡಲು ಬರುವುದನ್ನು ಆನಂದಿಸುವಂತೆ ಮಲ್ಟಿಪ್ಲೆಕ್ಸ್ಗಳು ದರಗಳನ್ನು ನಿಗದಿಪಡಿಸಬೇಕು, ಇಲ್ಲದಿದ್ದರೆ “ಸಿನಿಮಾ ಹಾಲ್’ಗಳು ಖಾಲಿಯಾಗಿರುತ್ತವೆ” ಎಂದು ಸುಪ್ರೀಂಕೋರ್ಟ್ ಉಲ್ಲೇಖಿಸಿದೆ.
“ನೀವು ನೀರಿನ ಬಾಟಲಿಗೆ 100 ರೂಪಾಯಿ, ಕಾಫಿಗೆ 700 ರೂಪಾಯಿ ವಿಧಿಸುತ್ತೀರಿ…” ಎಂದು ನ್ಯಾಯಮೂರ್ತಿ ನಾಥ್ ಹೇಳಿರುವುದಾಗಿ ವರದಿಯಾಗಿದೆ. ಇದಕ್ಕೆ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ, “ತಾಜ್ ಕಾಫಿಗೆ 1000 ರೂಪಾಯಿ ವಿಧಿಸುತ್ತಾರೆ, ನೀವು ಅದನ್ನು ಸರಿಪಡಿಸಬಹುದೇ?” ಎಂದು ಕೇಳಿದರು.
BREAKING : ‘₹5 ಪೌಚ್’ನಲ್ಲಿ ಕೇಸರಿ ಸಾಧ್ಯವಿಲ್ಲ’ : ನಟ ‘ಸಲ್ಮಾನ್ ಖಾನ್’ಗೆ ಗ್ರಾಹಕ ನ್ಯಾಯಾಲಯದಿಂದ ನೋಟಿಸ್
BREAKING : 8ನೇ ವೇತನ ಆಯೋಗದ ಅಧ್ಯಕ್ಷರಾಗಿ ‘ನ್ಯಾ. ರಂಜನಾ ದೇಸಾಯಿ’ ನೇಮಕ, 18 ತಿಂಗಳ ಕಾಲಾವಕಾಶ!








